ಅರ್ಥಪೂರ್ಣ ಆಚರಣೆ

0
240

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಸ್ವಾಭಿಮಾನ ಮತ್ತು ಸ್ವಾವಲಂಬನೆ ಇಲ್ಲದವ ಶವಕ್ಕೆ ಸಮಾನ, ಪ್ರತಿಯೊಬ್ಬರಿಗೂ ಜ್ಞಾನದೊಂದಿಗೆ ಶಿಕ್ಷಣವನ್ನು ಪಡೆದು ಸಮಾಜದ ಎಲ್ಲಾ ರಂಗಳಲ್ಲಿ ಸಮಾನತೆಯನ್ನು ಅಳವಡಿಸಿಕೊಳ್ಳುವಂತೆ ಮಾಡಿದ ದಿವ್ಯ ಚೇತನ,ರಾಷ್ಟ್ರದ ಶಕ್ತಿ, ಡಾ.ಬಿಆರ್.ಅಂಬೇಡ್ಕರ್ ಎಂದು ತಾಲ್ಲೂಕು ತಹಸೀಲ್ದಾರ್ ಅಜಿತ್ ಕುಮಾರ್ ರೈ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಆಡಳಿತ ಶಿಡ್ಲಘಟ್ಟ ತಾಲ್ಲೂಕು ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 126ನೇ ಜಯಂತಿ ಮತ್ತು ಡಾ.ಬಾಬು ಜಗಜೀವನ್ ರಾಂ ರವರ 110 ನೇ ಜನ್ಮ ದಿನಾಚರಣೆಯ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು ಸಮಾಜದ ಸಮಾನತೆಯ ಅವಕಾಶಗಳನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಸಂವಿಧಾನ ರಚಿಸಿದ ಶೋಷಿತ ಸಮಾಜ ಅಸೃಶ್ಯತೆ ವಿರುದ್ಧ ಬಹಳಷ್ಟು ಒಲವು ನೀಡುವ ಮೂಲಕ ಹೋರಾಟ ನಡೆಸಿದ ದೀಮಂತ ನಾಯಕ ಸಂವಿಧಾನದ ಕರಡು ಸಮಿತಿ ಅಧ್ಯಕ್ಷ ಬಾಬಾಸಾಹೇಬ್ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ರೆಡ್ಡಿ ಮಾತನಾಡಿ ಹಸಿರು ಕ್ರಾಂತಿಯ ಹರಿಕಾರಕ , ಬಾಬು ಜಗಜೀವನ ರಾಮ ದೇಶ ಕಂಡ ಅಪ್ರತಿಮ ಸಂಸದೀಯ ಪಟುವಾಗಿದ್ದರು. ಅಂಬೇಡ್ಕರ್ ನಂತೆ ದಲಿತ, ಹಿಂದುಳಿದ ವರ್ಗದವರು ಸೇರಿದಂತೆ ಸಮಸ್ತ ಶೋಷಿತ ಸಮುದಾಯಗಳ ಪರವಾಗಿ ಅವರು ಹೋರಾಟ ಮಾಡಿದವರು. 40 ವರ್ಷಗಳ ಕಾಲ ಅವರು ಲೋಕಸಭೆ ಸದಸ್ಯರಾಗಿ ವಿವಿಧ ಖಾತೆಗಳ ಸಚಿವರಾಗಿ ದಕ್ಷತೆಯಿಂದ ಕೆಲಸ ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು.

ಶಾಸಕ ಎಂ.ರಾಜಣ್ಣ ಮಾತನಾಡಿ ಸಮಾಜದ ನೀಚ ಪದ್ಧತಿಯನ್ನು ಹೋಗಲಾಡಿಸಲು ಅಂಬೇಡ್ಕರ್ ರವರು ಸ್ವಾತಂತ್ರ ನಂತರ ದೂರದೃಷ್ಟಿ ಇಟ್ಟುಕೊಂಡು ಸಮಾಜದಲ್ಲಿ ಸಮಾನತೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರಯತ್ನ ಪಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಾವು ಅವರ ಆದಶ೯ಗಳನ್ನು ಪಾಲಿಸದೆ ಮತ್ತು ಬೆಳಸಿಕೊಳ್ಳದೆ ವಿಫಲರಾಗುತ್ತಿದ್ದಿರಿ , ಮಹಾಪುರಷನ ವಿಚಾರಗಳನ್ನು ಪಾಲಿಸಬೇಕು ಎಂದರು.

ಇದೇ ಸಂದಭ೯ದಲ್ಲಿ ಅಪಘಾತದಲ್ಲಿ ಮೃತಪಟ್ಟ ಪತಿಯನ್ನು ಕಳೆದುಕೊಂಡ ತೀರಾ ಬಡ ವಿಧುವೆಯರಿಗ ಟೈಲರ್ ಮಿಷನ್ ಯಂತ್ರ ಉಚಿತವಾಗಿ ನೀಡಲಾಯಿತು. ಇಬ್ಬರು ಕುಗ್ರಾಮದ ಸೈನಿಕರಿಗೆ ಸನ್ಮಾನ ಮಾಡಲಾಯಿತು.

ಕಾಯ೯ಕ್ರಮದಲ್ಲಿ ನಗರಸಭೆ ಅಧ್ಯಕ್ಷ ಅಕ್ಸರ್ ಪಾಷ.ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಇ.ಓ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ, ಬಿ.ಇ.ಓ. ಎಸ್. ರಘುನಾಥ್ ರೆಡ್ಡಿ, ಮುಂತಾದವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here