ಅರ್ಥಪೂರ್ಣ ಜನ್ಮದಿನಾಚರಣೆ

0
197

ಮಂಡ್ಯ/ಮಳವಳ್ಳಿ: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದು.ದನಕರುಗಳಿಗೆ ಮೇವು ಇಲ್ಲದೆ ಪರದಾಡುವ ಸಂದಭ೯ದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ಎಸ್ ಯಡಿಯೂರಪ್ಪ ರವರ 74 ನೇ ವಷ೯ದ ಅಂಗವಾಗಿ ಜಾನುವಾರುಗಳಿಗೆ ಮೇವು ವಿತರಣೆ ಮಾಡುವ ಮೂಲಕ ಹುಟ್ಟುಹಬ್ಬ ಅಚರಣೆ ಮಾಡಿದ ಅಪರೂಪ ಪ್ರಸಂಗ ಮಳವಳ್ಳಿ ತಾಲ್ಲೂಕಿನ ಡಿ.ಹಲಸಹಳ್ಳಿ ಗ್ರಾಮದಲ್ಲಿ ನಡೆಸಲಾಯಿತು. ಕಾಯ೯ಕ್ರಮವನ್ನು ದನಗೂರು ವೀರಾಸಿಂಹಾಸನ ಮಠದ ಮುಮ್ಮಡಿ ಷಡಕ್ಷರ ದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ ಬರಗಾಲ ವಿರುವ ಈ ಕಾಲದಲ್ಲಿ ಎಮ್ಮೆಹಸುಕರುಗಳಿಗೆ ಮೇವು ಹಂಚುವ ಮೂಲಕ ಹುಟ್ಟುಹಬ್ಬ ಅಚರಣೆ ಮಾಡುತ್ತಿರುವುದು ಸಂತಸ ಎಂದರು. ಬಿಜೆಪಿ ಮುಖಂಡ ಅಶೋಕ್ ಕುಮಾರ್ ಮಾತನಾಡಿ ಸರಳವಾಗಿ ಆಚರಿಸುವಂತೆ ನಮ್ಮ ನಾಯಕರಾದ ಯುಡಿಯೂರಪ್ಪ ತಿಳಿಸಿದ್ದು ರೈತರಿಗೆ ಅನುಕೂಲವಾಗುವ ಕಾಯ೯ಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು. ಇದೇ ಸಂದಭ೯ದಲ್ಲಿ ಹಲಸಹಳ್ಳಿ ಗವಿ ಮಠದ ಷಡಕ್ಷರ ಸ್ವಾಮಿ.ಮಹೇಶ.ಪಂಚಾಕ್ಷರಿ ಇದ್ದರು

LEAVE A REPLY

Please enter your comment!
Please enter your name here