ಅಲ್ಲಮ’ ವಿಮರ್ಶೆ: ಸಿನಿಮಾ ಮಾಯೆಯೆಂಬರು, ಮಾಯೆ ಅಲ್ಲ ಗುಹೇಶ್ವರ!

0
259
Nammuru T V Online News Channel
Nammuru T V Online News Channel

ಇತಿಹಾಸ ಪುರುಷರನ್ನು ತೆರೆಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಅಂತಹ ಸಾಹಸಕ್ಕೆ ಕೈ ಹಾಕಿ, ‘ಅಲ್ಲಮ’ ಚಿತ್ರದ ಮೂಲಕ ಸವಾಲು ಸ್ವೀಕರಿಸಿ ನಿರ್ದೇಶಕ ಟಿ.ಎಸ್.ನಾಗಾಭರಣ ಅಕ್ಷರಶಃ ಯಶಸ್ವಿಯಾಗಿದ್ದಾರೆ ಅಂದ್ರೆ ಖಂಡಿತ ತಪ್ಪಾಗಲಾರದು.

ವಚನಕಾರ ‘ಅಲ್ಲಮ’ ಜೀವನಚರಿತ್ರೆ 12ನೇ ಶತಮಾನದ ವಚನಕಾರರ ಪೈಕಿ ಪ್ರಮುಖರಾಗಿದ್ದ ‘ಅಲ್ಲಮ’ರ ಜೀವನಚರಿತ್ರೆಯೇ ಈ ಸಿನಿಮಾ. ಮದ್ದಳೆ ಬಾರಿಸುವ ಬಾಲಕನಿಂದ ಹಿಡಿದು ಬಸವ ಕಲ್ಯಾಣದ ಅನುಭವ ಮಂಟಪದ ಶೂನ್ಯ ಸಿಂಹಾಸನ ಏರುವವರೆಗೂ ‘ಅಲ್ಲಮ’ನ ಜೀವನವನ್ನ ಚಿತ್ರದಲ್ಲಿ ಕಲಾತ್ಮಕವಾಗಿ ಕಟ್ಟಿಕೊಡಲಾಗಿದೆ.’ಅಲ್ಲಮ’ನ ಪಾತ್ರದಲ್ಲಿ ಧನಂಜಯ್ ಅಭಿನಯ ಹೇಗಿದೆ.? ವಚನಕಾರ, ಶಿವಾಂಶ ಸಂಭೂತ ಅಲ್ಲಮ ಪ್ರಭು ಪಾತ್ರದಲ್ಲಿ ನಟ ಧನಂಜಯ್ ಅಭಿನಯ ಅಚ್ಚುಕಟ್ಟಾಗಿದೆ. ಪಾತ್ರಕ್ಕಾಗಿ ಮದ್ದಳೆ ಬಾರಿಸುವುದನ್ನೂ ಕಲಿತಿರುವ ಧನಂಜಯ್ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಕಣ್ಮನ ಸೆಳೆಯುವ ಮೇಘನಾ ರಾಜ್ ನೃತ್ಯಗಾರ್ತಿ ಮಾಯಾದೇವಿ ಪಾತ್ರದಲ್ಲಿ ಮೇಘನಾ ರಾಜ್ ಕಣ್ಮನ ಸೆಳೆಯುತ್ತಾರೆ. ಕಣ್ಮುಂದೆ ಇದೆ 12ನೇ ಶತಮಾನ! 12ನೇ ಶತಮಾನದ ಸ್ಥಿತಿ-ಗತಿಯನ್ನ ಇಂದಿನ ಕಮರ್ಶಿಯಲ್ ಯುಗದ ತೆರೆಮೇಲೆ ತರುವುದು ಸುಲಭದ ಕೆಲಸ ಅಲ್ಲ. ಹೀಗಾಗಿ, ಆ ಕಾಲದ ಭವ್ಯ ಇತಿಹಾಸ ಸಾರುವ ಪುರಾತನ ದೇವಾಲಯಗಳಲ್ಲೇ ಚಿತ್ರೀಕರಣ ಮಾಡಿ 12ನೇ ಶತಮಾನವನ್ನ ಪ್ರೇಕ್ಷಕರ ಕಣ್ಮುಂದೆ ತಂದಿದ್ದಾರೆ ನಿರ್ದೇಶಕ ಟಿ.ಎಸ್.ನಾಗಾಭರಣ.

LEAVE A REPLY

Please enter your comment!
Please enter your name here