ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

0
678

ವಿಜಯಪುರ-ಸಿಂದಗಿ:ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಕುರಿತು ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಂಬಂಧ ಸಂಸದ ಪ್ರತಾಪ ಸಿಂಹ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವ ಅಭಿಮಾನಿಗಳಿಂದ ಟೈರಗೆ ಬೆಂಕಿ ಹಚ್ಚಿ ಸಂಸದ ಪ್ರತಾಪ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸಂಸದ ಪ್ರತಾಪ ಸಿಂಹ ಕಿತ್ತೂರ ಚನ್ನಮ್ಮ ಮತ್ತು ಒಣಕೆ ಓಬವ್ವ ಅಭಿಮಾನಿಗಳಿಗೆ ಬಹಿರಂಗವಾಗಿ ಕ್ಷಮೆಗೆ ಆಗ್ರಹಿಸಿದರು.
ಇದೇ ಸಂದಭ೯ದಲ್ಲಿ ಪಂಚಮಸಾಲಿ ಮುಖಂಡರಾದ ನಿಂಗರಾಜ ಅತನೂರ ಮಾತನಾಡಿ, ಬ್ರಿಟಿಶರೊಂದಿಗೆ ರಾಣಿ ಚನ್ನಮ್ಮ ಹೈದರಾಲಿ ಅವರೊಂದಿಗೆ ಒನಕೆ ಓಬವ್ವ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳುವ ಮೂಲಕ ನಾಡಿಗಾಗಿ ಹೋರಾಡಿದ ವೀರನಾರಿಯರಿಗೆ ಅವಮಾನ ಮಾಡಿದ್ದಾರೆ. ಇತಿಹಾಸ ತಿರುಚುವ ಇಂಥ ಹೇಳಿಕೆ ಖಂಡನಾಹ೯ ಎಂದರು.
ಪ್ರತಿಭಟನೆಯಲ್ಲಿ ದಾನಪ್ಪಗೌಡ ಚನಗೊಂಡ, ಎಂ.ಎನ್ ಪಾಟೀಲ. ಕಲ್ಲಪ್ಪ ಗಾಡದ, ಅರವಿಂದ ಹಂಗರಗಿ, ಪರಸುರಾಮ ಕಾಂಬಳೆ, ಹಾಗೂ ಕಿತ್ತೂರ ರಾಣಿ ಚನ್ನಮ್ಮ ಅಭಿಮಾನಿಗಳು ಪಾಲ್ಗೊಂಡಿದ್ದರು..

 

ವರದಿ: ನಮ್ಮೂರು ಟಿವಿ ನಂದೀಶ
ಸಿಂದಗಿ-9880624377

LEAVE A REPLY

Please enter your comment!
Please enter your name here