ಅವಿನಾಭಾವ ಸಂಬಂಧ..

0
215

ಬಳ್ಳಾರಿ /ಹೊಸಪೇಟೆ :ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿ ರಾಮನಾಥ್ ಗೋವಿಂದ್ ಅವರಿಗೂ ಹಂಪಿಗೂ ಅವಿನಾಭಾವ ಸಂಬಂಧವಿದೆ. ಹಂಪಿಯನ್ನು ಅತಿ ಹೆಚ್ಚು ಇಷ್ಟಪಡುವ ಗೋವಿಂದ್ ಅವರು ಇಲ್ಲಿಯವರೆಗೆ ಎರಡು ಬಾರಿ ಹಂಪಿಗೆ ಭೇಟಿ ನೀಡಿ, ಸ್ಮಾರಕಗಳ ವೀಕ್ಷಣೆ ಮಾಡಿದ್ದಾರೆ. ಸರಳತೆಯನ್ನು ಮೈಗೂಡಿಸಿಕೊಂಡಿರುವ ಗೋವಿಂದ್ ೨೦೧೧ರಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಹಂಪಿಗೆ ಆಗಮಿಸಿದ್ದರು. ೨೦೧೨ರಲ್ಲಿ ಮತ್ತೊಮ್ಮೆ ಆಗಮಿಸಿ ನಾಲ್ಕು ದಿನಗಳ ಕಾಲ ಹಂಪಿಯ ಸ್ಮಾರಕಗಳ ಸೊಬಗು ನೋಡಿ ಬೆರಗಾಗಿದ್ದರು. ಲೋಕ ಕಲ್ಯಾಣಾರ್ಥ ಹಂಪಿ ಭೇಟಿ ವೇಳೆ ಶ್ರೀ ವಿರುಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ವಿಜಯನಗರ ಸಾಮ್ರಾಜ್ಯದ ವೈಖರಿ ಬಗ್ಗೆ ಬಹು ಅಭಿಮಾನದಿಂದ ಮೆಚ್ಚಿಕೊಂಡಿದ್ದರು. ಗೋವಿಂದ್ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿದ್ದ ವೇಳೆ ಹಂಪಿಗೆ ಭೇಟಿ ನೀಡಿದ್ದರು. ಇಂಥ ಮಹನೀಯರು ಸಾಮಾನ್ಯರಂತೆ ನಾಲ್ಕು ದಿನ ಹಂಪಿ ವೀಕ್ಷಿಸಿದ್ದು,ಅವರ ಜೊತೆ ಕಾಲ ಕಳೆದದ್ದು ವಿಶೇಷ ಅನುಭವ ನೀಡಿದೆ. ಊಟದ ತಟ್ಟೆಯಲ್ಲಿ ಅನ್ನ ಹಾಗೇ ಬಿಟ್ಟಿದ್ದಕ್ಕೆ, ಅನ್ನದಾತನ ಶ್ರಮ ವ್ಯರ್ಥ ಮಾಡಬೇಡಿ ಎಂದು ಹೇಳಿದ್ದನ್ನು ಹೊಸಪೇಟೆ ನಗರಸಭೆ ಸದಸ್ಯ ಚಂದ್ರಕಾಂತ್ ಕಾಮತ್ ನೆನಪಿಸಿಕೊಂಡರು.

LEAVE A REPLY

Please enter your comment!
Please enter your name here