ಅಸಹಾಯಕ ಸ್ಥಿತಿಯಲ್ಲಿದ್ದಾರಾ ಅಧಿಕಾರಿಗಳು..?

0
172

ಬೆಂಗಳೂರು ಗ್ರಾಮಾಂತರ /ದೊಡ್ಡಬಳ್ಳಾಪುರ : ಇತ್ತೀಚೆಗೆ ತಾಲೂಕಿನ ಕೊಡಿಗೆಹಳ್ಳಿ ಪಂಚಾಯ್ತಿ ವ್ಯಾಪ್ತಿ ಯಲ್ಲಿ ನೀತಿಸಂಹಿತೆ ಉಲ್ಲಂಘನೆ ಮಾಡಿ ಎರಡು ಕಡೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡುತ್ತಿರುವುದು ಚುನಾವಣಾ ಕಂಟ್ರೋಲ್ ರೂಮ್ ಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೆಪ ಮಾತ್ರಕ್ಕೆ ನೋಟೀಸ್ ನೀಡಿ ಸುಮ್ಮನಾದ ಹಿನ್ನಲೆಯಲ್ಲಿ ಮತ್ತೆ ನೀತಿ ಸಂಹಿತೆ ಉಲ್ಲಂಘನೆ ಮುಂದುವರೆಸಿದ ಗುತ್ತಿಗೆದಾರರು ನಗರದ ಕೋರ್ಟ್‌ ರಸ್ತೆ ಹೀರೊ ಶೋರೂಂ ಪಕ್ಕದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾರೆ.

ನೀತಿಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳ ಬೇಕಿರುವ ಅಧಿಕಾರಿಗಳು ,ಸಿಬ್ಬಂದಿ ದೂರು ಬಂದ ಸ್ಥಳಕ್ಕೆ ದಾವಿಸಿ ಕಾಮಗಾರಿ ವೀಕ್ಷಿಸಿ, ಹೋದ ಪುಟ್ಟಾ…ಬಂದ ಪುಟ್ಟಾ..? ಹಾಜರಾತಿ ಹಾಕಿಬರು ವಂತಾಗಿದೆ ಇವರ ಡ್ಯೂಟಿ…ಬಿಟ್ರೆ ಕ್ರಮ ತೆಗೆದುಕೊಳ್ಳುವ ಸಾಹಸ ಮಾಡುತ್ತಿಲ್ಲ.

ನೀತಿ ಸಂಹಿತೆ ಉಲ್ಲಂಘಣೆ ಮಾಡುತ್ತಿರುವರ ವಿರುದ್ಧ ಚುನಾವಣಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಿ ಕಡಿವಾಣ ಹಾಕದೇ ಇರುವುದೇ ಮತ್ತೆ ಮತ್ತೆ ನೀತಿಸಂಹಿತೆ ಉಲ್ಲಂಘನೆಗೆ ಕಾರಣ ಎಂದು ಕೇಳಿ ಬರುತ್ತಿದೆ.

ಕೇವಲ ಸಭೆಗಳು ಕರೆದು ನೀತಿಸಂಹಿತೆ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಚುನಾವಣಾ ಅಧಿಕಾರಿ ಡಾ.ರಾಜೇಂದ್ರ ಕುಮಾರ್ ಮತ್ತು ಉಪ ಚುನಾವಣಾ ಅಧಿಕಾರಿ ತಹಶಿಲ್ದಾರ್ ಮೋಹನ್ ಎಚ್ಚರಿಕೆ ನೀಡುವುದು ಬಿಟ್ಟರೆ ಕ್ರಮ ಜರುಗಿಸಿದ ಉದಾಹರಣೆ ಕಂಡುಬಂದಿಲ್ಲ. ಈಬಹಿನ್ನಲೆಯಲ್ಲಿ ಎಲ್ಲೋ ಒಂದು ಕಡೆ ರಾಜಕಾರಣಿಗಳ ಪ್ರಭಾವದಿಂದ ತಪ್ಪಿತಸ್ಥ ರ ವಿರುದ್ಧ ಕ್ರಮಜರುಗಿಸಲು ಅಧಿಕಾರಿಗಳ ಅಸಹಾಯಕ ಸ್ಥಿತಿಯಲ್ಲಿದ್ದಾರಾ ? ಎನ್ನುವ ಪ್ರಶ್ನೆ ಕಾಡುತ್ತಿದೆಯಂತೆ ಜನಸಾಮಾನ್ಯರಲ್ಲಿ.

LEAVE A REPLY

Please enter your comment!
Please enter your name here