ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆ ಅರಿವು ಜಾಥ…

1
340

ತುಮಕೂರು/ಪಾವಗಡ:ಸಕಾ೯ರಿ ಆಸ್ಪತ್ರೆಯ ಎನ್.ಸಿ.ಡಿ ಕ್ಲಿನಿಕ್ ಪಾವಗಡ, ವಿಶ್ವ ಗ್ರಾಮೋದಯ ಸ್ವಯಂ ಸೇವಾ ಸಂಸ್ಥೆ ಪಾವಗಡ, ಸಕಾ೯ರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬಿ. ಅಚ್ಚಮ್ಮನಹಳ್ಳಿ  ಇವರುಗಳ ಸಹಯೋಗದಲ್ಲಿ ಕಡಪಲಕೆರೆಯ ಉಪ ಕೇಂದ್ರದ ವ್ಯಾಪ್ತಿಯ ಬಿ.ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆ ಅರಿವು ಮೂಡಿಸಲು ಜನ ಜಾಗೃತಿ ಜಾಥಾ ನಡೆಯಿತು.

ಶಾಲಾ ವಿದ್ಯಾರ್ಥಿಗಳು, ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮದ್ಯಪಾನ ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನ ನಡೆಸಿ,ಉತ್ತಮ ಜೀವನ ಶೈಲಿ, ಉತ್ತಮ ಆರೋಗ್ಯದ ಕೀಲಿ ಕೈ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಅರಿವು ಮೂಡಿಸಿದರು.ನಂತರ ಶಾಲಾ  ಆವರಣದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎನ್.ಸಿ.ಡಿ ಕ್ಲಿನಿಕ್ ನ  ಸಿಬ್ಬಂದಿಿ ಆರ್. ಓಂಕಾರ್, ಎಂ. ಗಂಗಾಧರ, ಪ್ರಮೀಳಾ.ಟಿ, ಎಂ.ಡಿ.ಖಾಸೀಮ್, ಹಾಗೂ ANM ಶ್ರೀಮತಿ ಅನಿತಾ, ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಸ.ಹಿ.ಪ್ರಾ.ಪಾಠಶಾಲೆಯ ಶಿಕ್ಷಕರು, ವಿಶ್ವ ಗ್ರಾಮೋದಯ ಸಂಸ್ಥೆಯ ಬಿ.ಎನ್.ಶಿವಕುಮಾರ್,ಮತ್ತು ಸ್ವಯಂ ಸೇವಕರು, ಗ್ರಾಮಸ್ಥರು ಭಾಗವಹಿಸಿದ್ದರು.

1 COMMENT

LEAVE A REPLY

Please enter your comment!
Please enter your name here