ಬಳ್ಳಾರಿ/ಬಳ್ಳಾರಿ:ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ವಿ.ವೆಂಕಟೇಶ್ ಅವರು ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ನೌಕರ ಒಕ್ಕೂಟ ರಾಜ್ಯ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಈ ಕುರಿತು ವೇದಿಕೆ ಸಂಸ್ಥಾಪಕ ಮಲ್ಲಿನಾಥ್ ಬಳ್ಳಾರಿಕರ್ ಅವರು ಪ್ರಕಟಣೆ ನೀಡಿದ್ದು, ವಿ.ವೆಂಕಟೇಶ್ ಅವರು ವೇದಿಕೆಯ ಕಾರ್ಯಾಧ್ಯಕ್ಷರೂ ಕೂಡ.
ಇವರು ಸಮಾಜದ ಒಳಿತಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲಿದ್ದಾರೆ. ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತರ, ನೌಕರರ ಶೋಷಣೆ ವಿರುದ್ಧ ಸೇವೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.