ಆಂಬುಲೆನ್ಸ್ ನಿರ್ಲಕ್ಷ್ಯ ಕ್ಕೆ ಬಾಲಕ ಬಲಿ..!?

0
665

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ತಾಲ್ಲೂಕಿನ ಗೊರಮೊಡಗು ಗ್ರಾಮದ ಅಶ್ವಥಪ್ಪ ಮುನಿರತ್ನಮ್ಮ ನವರ ಸುಮಾರು 14 ವರ್ಷದ ಏಕೈಕ ಪುತ್ರ ಬಾಬು ಮೃತಪಟ್ಟ ದುರಂತ ಘಟನೆ.ಗ್ರಾಮದ ಕೊತ್ತನೂರು ರಸ್ತೆಯ ಮಾರ್ಗದ ಕುಂಟೆಯಲ್ಲಿ ಕುರಿಗಳು ತೊಳೆಯುವ ವೇಳೆ ನೀರಲ್ಲಿ ಜಾರಿ ಬಿದ್ದು ಕೆಸರಿನ ಹೊಳಲ್ಲಿ ಯುವಕ ಸಿಲುಕಿದ ಘಟನೆ.108 ಆಂಬುಲೆನ್ಸ್ ನಿರ್ಲಕ್ಷದಿಂದ ಬಾಲಕ ಬಲಿ ಮೃತನ ಪೋಷಕರು ಆಕ್ರೋಶ.ಸುಮಾರು 1 ಗಂಟೆ 30 ನಿಮಿಷ ನಗರದ ಸಾರ್ವಜನಿಕ ಆಸ್ಪೆತ್ರೆಯಿಂದ ಬೇರೆ ಆಸ್ಪತ್ರೆಗೆ ತೆರಳಲು ಸಾವು ನೋವಿನ ಮಧ್ಯೆ ನರಳುತ್ತಿದ್ದ ದುರಸ್ಥಿತಿ.ಬೇರೆ ಆಸ್ಪತ್ರೆ ರವಾನೆಗೆ 108 ಆಂಬುಲೆನ್ಸ್ ಗೆ ಕರೆ ಮಾಡಿ ಮಾಡಿ ಸುಸ್ತಾಗಿ ಯುವಕ ಸತ್ತ ಮೇಲೆ ಪೋಷಕರು ಕಣ್ಣೀರಿಟ್ಟ ಘಟನೆ.ಆಂಬುಲೆನ್ಸ್ ಬರುವಷ್ಟರಲ್ಲಿ ಯುವಕ ಶಿಡ್ಲಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು.ದಾನಿಗಳು ನೀಡಿದ ಹೋಬಳಿ ಮಟ್ಟದ ಅಂಬುಲೇನ್ಸ್ ಗಳನ್ನು ತುರ್ತು ಪರಿಸ್ಥಿತಿಯಲ್ಲಿ ಏಕೆ ಬಳಸಿಕೊಳ್ಳಲಿಲ್ಲ ಎಂದು ವೈದ್ಯರ ನಿರ್ಲಕ್ಷಕ್ಕೆ ಆಕ್ರೋಶ.ಮೃತನ ಪೋಷಕರು ಕೇಳಿದ ಪ್ರಶ್ನೆಗೆ ಅವುಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ವೈದ್ಯಾಧಿಕಾರಿ ಡಾ.ಸುನೀತ ಹಾರಿಕೆ ಉತ್ತರ.ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ತಹಶೀಲ್ದಾರ್ ಅಜಿತ್ ಕುಮಾರ್ ರೈ ಆಸ್ಪತ್ರೆ ಬಳಿ ಭೇಟಿ ನೀಡಿ 5000 ಸಾವಿರ ರೂಪಾಯಿಗಳು ಅಂತ್ಯ ಸಂಸ್ಕಾರ ಯೋಜನೆ ಚೆಕ್ ನೀಡಿದ್ದು.25.000 ರೂಪಾಯಿಗಳಷ್ಟು ಮಕ್ಕಳ ಕ್ಷೇಮಾಭಿವೃದ್ಧಿ ಯೋಜನೆಯಿಂದ ತಾಲ್ಲೂಕು ಪಂಚಾಯಿತಿ ವತಿಯಿಂದ ನೀಡುವುದಾಗಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here