ಆಕಸ್ಮಿಕ ಬೆಂಕಿ,ಅಪಾರ ನಷ್ಟ

0
163

ಬಳ್ಳಾರಿ /ಹೂವಿನಹಡಗಲಿ: ತಾಲೂಕು ಹರವಿಗ್ರಾಮದಲ್ಲಿ ಗುಡ್ಡಪ್ಪ ಕಾಟಣ್ಣನವರ ಎಂಬ ರೈತನ ಮನೆಗೆ ಬೆಂಕಿ ಬಿದ್ದು ಎರಡು ಹಸು ಸೇರಿದಂತೆ ಮನೆಯಲ್ಲಿದ್ದ ದವಸ ಧಾನ್ಯ, ಮನೆ ದಾಖಲಾತಿ ಪತ್ರಗಳು ಹಾಗೂ ಜಮೀನಿಗೆ ಹಾಕಲು ತಂದಿಟ್ಟಿದ್ದ 20ಚೀಲ ಗೊಬ್ಬರ, ಐವತ್ತು ಸಾವಿರ ನಗದು ಹಾಗೂ ಮೂರು ತೊಲೆ ವಡವೆ ವಸ್ತ್ರಗಳು ಸಂಪೂರ್ಣ ಸುಟ್ಟುಹೋಗಿ ಲಕ್ಷಾಂತರ ಹಾನಿಯಾದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಘಟನೆ:ಗ್ರಾಮದ ಬಡರೈತನಾದ ಗುಡ್ಡಪ್ಪನಿಗೆ ಗ್ರಾಮದಲ್ಲಿ ಸರಿಯಾದ ನೆಲೆಇಲ್ಲದ ಕಾರಣ ತುಂಗಭದ್ರ ನದಿತೀರದ ರಸ್ತೆಯಲ್ಲಿ ಚಪ್ಪರವನ್ನು ಹಾಕಿಕೊಂಡು ಜೀವನ ನೆಡೆಸುತ್ತಿದ್ದನು. ಶನಿವಾರ ಮದ್ಯಾಹ್ನ ಗುಡ್ಡಪ್ಪ ದೇವರ ಪೂಜೆಗೆಂದು ದೀಪ ಹಚ್ಚಿ ಪೂಜೆ ಮುಗಿಸಿ ಹೊಲದ ಕಡೆಗೆ ಹೋಗಿದ್ದಾನೆ ನಂತರ ಸಂಜೆ ವೇಳೆಗೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ ಗ್ರಾಮಸ್ಥರು ನೋಡಿ ಬೆಂಕಿ ಆರಿಸುವಲ್ಲಿಗೆ ಮನೆ ಸಂಪೂರ್ಣ ಸುಟ್ಟುಹೋಗಿದೆ. ಇದರಿಂದ ಬಡ ರೈತ ಈಗ ಇದ್ದ ಸೂರು ಕಳೆದುಕೊಂಡಿದ್ದಾನಲ್ಲದೆ ಉಟ್ಟ ಬಟ್ಟೆಯಮೇಲೆ ಬೀದಿಯಲ್ಲಿ ನಿಂತಿದ್ದಾನೆ. ಸ್ಥಳಕ್ಕೆ ಹೂವಿನಹಡಗಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಹಿರೆಹಡಗಲಿ ಪಿ.ಎಸ್.ಐ ಬೇಟಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here