ಆಕಸ್ಮಿಕ ಬೆಂಕಿಯಿಂದ ಗೋಡನ್ ಭಸ್ಮ .

0
100

ಚಿಕ್ಕಬಳ್ಳಾಪುರ /ಚಿಂತಾಮಣಿ ನಗರ ನಗರ್ತಪೇಟೆಯಲ್ಲಿ ಆಕಸ್ಮಿಕ ಬೆಂಕಿಯಿಂದ ಗೋಡನ್ ನ ಭಸ್ಮ .

ಶಂಕರಮಠ ದೇವಸ್ಥಾನ ರಸ್ತೆಯಲ್ಲಿ ಇರುವ ನಾಗೇಂದ್ರ ಎಂಬುವವರ ದಿನನಿತ್ಯ ತಯಾರಿಸುವ ಪದಾರ್ಥಗಳು ಮಿಕ್ಚರ್,ಚಿಪ್ಸ್ , ಕುರ್ಕುರೆ ಇನ್ನೂ ಹಲವು ತಿನ್ನುವ ಪದಾರ್ಥಗಳು ತಯಾರಿಸುತ್ತಾರೆ. ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಿದ್ದ ನಂತರ ರಾತ್ರಿ ಸುಮಾರು 2 ಗಂಟೆಯಲ್ಲಿ ಬೆಂಕಿಯು ಕಾಣಿಸಿಕೊಂಡಿತು. ಅದನ್ನು ನೋಡಿದ ಪಕ್ಕದ ಮನೆ ಅವರು ನಾಗೇಂದ್ರರವರಿಗೆ ಸುದ್ದಿ ಮುಟ್ಟಿಸಿದ್ದರು. ಹೊರಗೆ ಬಂದು ನೋಡಿದಾಗ ಬೆಂಕಿ ಯನ್ನು ನೋಡಿ ಅಗ್ನಿಶಾಮಕ ದಳ ಮತ್ತು ನಗರ ಪೊಲೀಸರಿಗೆ ದೂರವಾಣಿ ಮುಖಾಂತರ ಸುದ್ದಿಯನ್ನು ತಿಳಿಸಿದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ .
ಇದರಲ್ಲಿ ಯಾವುದೇ ಪ್ರಾಣಾಪಾಯಾಗಿಲ್ಲ ಎಂದು ತಿಳಿಸಿದರು.
ಇವರಿಗೆ ಸುಮಾರು ಮೂರು ಲಕ್ಷ ವರೆಗೂ ಪದಾರ್ಥಗಳಲ್ಲಿ ನಷ್ಟವಾಗಿದೆ ಎಂದು ಮನೆ ಮಾಲೀಕ ನಾಗೇಂದ್ರ ತಿಳಿಸಿದ್ದಾರೆ.

ಈ ವಿಷಯವನ್ನು ಶಾಸಕರ ಗಮನಕ್ಕೆ ತಂದಾಗ ಸ್ಥಳಕ್ಕೆ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ತೆರಳಿ ಮನೆ ಮಾಲೀಕರಿಂದ ಮಾಹಿತಿ ಪಡೆದಾಗ ಇದು ಆಕಸ್ಮಿಕ ಬೆಂಕಿಯಿಂದ ಭಸ್ಮವಾಗಿದೆ ಎಂದರು .ಸ್ಥಳವನ್ನು ನೋಡಿ ಶಾಸಕರು ಜೆಕೆ ಕೃಷ್ಣಾರೆಡ್ಡಿ ಸ್ಥಳದಲ್ಲೇ ಸಂತ್ರಸ್ತರಿಗೆ ಹದಿನೈದು ಸಾವಿರ ಪರಿಹಾರ ನೀಡಿದರು.

LEAVE A REPLY

Please enter your comment!
Please enter your name here