ಆಟೋಚಾಲಕರಿಂದ ಅರವಂಟಿಗೆ….

0
96

ವಿಜಯಪುರ/ ಸಿಂದಗಿ:ಪ್ರತಿಯೊಬ್ಬ ಮನುಷ್ಯ ಒಂದು ದಿನ ಊಟ, ಉಪಹಾರವಿಲ್ಲದೆ ಬದುಕಬಹುದು ಆದರೆ ಕುಡಿಯುವ ನೀರಿಲ್ಲದೆ ಬದುಕಲಾರ ಆದ್ದರಿಂದ ಕುಡಿವ ನೀರಿನ ಸೇವೆ ಅತ್ಯಂತ ಹಿರಿದು ಎಂದು ಪಿಎಸ್ಐ ನಿಂಗಪ್ಪ ಪೂಜಾರಿ ಹೇಳಿದರು.

ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಅಟೋ ಚಾಲಕರ ಸಂಘದ ವತಿಯಿಂದ ಕುಡಿಯುವ ನೀರಿನ ಅರವಟಿಗೆಯಲ್ಲಿನ ತಂಪಾದ ನೀರು ಕುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣಕ್ಕೆಆಗಮಿಸುವ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಅರವಂಟಿಗೆಗಳು ಅತಿ ಅಗತ್ಯವಾಗಿದ್ದು, ಅಟೋ ಚಾಲಕರು ಪ್ರತಿವರ್ಷ ಇಂಥ ಅರವಂಟಿಗೆ ಆರಂಭಿಸುತ್ತಿರುವುದು ಶ್ಲಾಘನೀಯ ಎಂದರು.

ಇದೇ ಸಂದಭ೯ದಲ್ಲಿ ಈ ಕಾಯ೯ದ ನೇತೃತ್ವ ವಹಿಸಿದ ಅಟೋ ಚಾಲಕ ಅರುಣ ಕುಲಕಣಿ೯ ಅವರನ್ನು ಸನ್ಮಾನಿಸಿ ಗೌರವಿಸಿದರು.

ರಾಘು ಪರೀಟ, ಸಂತೋಷ ವಡ್ಡರ, ಸುರೇಶ ವಾಲಿಕಾರ, ರಾಘು ಮರಬಿ, ರಾಜು ಕುಂಬಾರ ಇತರರು ಇದ್ದರು…

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here