ಆಟೋಚಾಲಕರಿಂದ ಬೆಳ್ಳಿ ಬಸವ ಮೆರವಣಿಗೆ ಹಾಗೂ ಅನ್ನಸಂತರ್ಪಣೆ..

0
303

ಬಳ್ಳಾರಿ/ಹೊಸಪೇಟೆ:ಶ್ರಾವಣಮಾಸದ ನಿಮಿತ್ತ ಐತಿಹಾಸಿಕ ಹಂಪಿಯ ನೂರಾರು ಆಟೋಚಾಲಕರು, ಶ್ರಾವಣ ಸೋಮವಾರ ಬೆಳ್ಳಿ ಬಸವ ಮೆರವಣಿಗೆ ನಡೆಸುವ ಮೂಲಕ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.

ವಿರೂಪಾಕ್ಷ ರಥ ಬೀದಿಯಲ್ಲಿ ಬೆಳ್ಳಿ ಬಸವ ಪಲ್ಲಕ್ಕಿ ಮೆರವಣಿಗೆ ನಡೆಸಿ, ಪಂಪಾಂಭಿಕೆ ಹಾಗೂ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಂಪಿಯ ಸುತ್ತಮುತ್ತಲಿನ 100ಕ್ಕೂ ಆಧಿಕ ಆಟೋಚಾಲಕರು, ಬೆಳ್ಳಿ ಬಸವ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ತಮ್ಮ ಆಟೋಗಳಿಗೆ ಪೂಜೆ ಸಲ್ಲಿಸಿ, ವಿರೂಪಾಕ್ಷ ರಥಬೀದಿಯಿಂದ ಎದುರು ಬಸವಣ್ಣ ಮಂಟಪದ ವರಗೆ ರ್ಯಾಲಿ ನಡೆಸಿದರು. ನಂತರ ಅನ್ನಸಂತರ್ಪಣೆ ನಡೆಸಿದರು. ಆಟೋಚಾಲಕರ ಸಂಘದ ಮುಖಂಡ ಪಾಲಕ್ಷ, ನಾಗರಾಜ, ಪಂಪಾಪತಿ, ರಘು, ಬೇಡರ ರಘು, ತಿಪ್ಪೇಶ, ಶರಣ, ಅನೀಫ್ ಹಾಗೂ ಚೆನ್ನಬಸವ ಇತರರಿದ್ದರು.
ಹಂಪಿ ಕ್ಷೇತ್ರದ ಆರಾಧ್ಯ ದೈವ ವಿರೂಪಾಕ್ಷನು, ವರ್ಷವಿಡಿ ದುಡಿಯುವ ಆಟೋಚಾಲಕರನ್ನು ಸದಾ ಕಾಲ ರಕ್ಷಣೆ ಮಾಡಲೆಂದು ಪ್ರತಿವರ್ಷ ಶ್ರಾವಣಮಾಸದ ಎರಡನೇ ಸೋಮವಾರ ಬೆಳ್ಳಿ ಬಸವ ಮೆರವಣಿಗೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿಸುವುದು ಪ್ರತಿವರ್ಷದ ವಾಡಿಕೆ..

LEAVE A REPLY

Please enter your comment!
Please enter your name here