ಆಟೋಚಾಲಕರ ಪ್ರತಿಭಟನೆ..

0
286

ಬಳ್ಳಾರಿ/ಹೊಸಪೇಟೆ:ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಆಟೋ ಚಾಲಕರಿಗೆ ಯೋಗ್ಯತಾ ಪ್ರಮಾಣ ಪತ್ರ ನೀಡಲು ಸಾರಿಗೆ ಇಲಾಖೆ, ದಂಡ ವಿಧಿಸಬಾರದೆಂದು ಆಗ್ರಹಿಸಿ, ಸ್ಥಳೀಯ ಫೆಡರೇಶನ್ ಆಫ್ ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್ ನೇತೃತ್ವದಲ್ಲಿ ನೂರಾರು ಆಟೋಚಾಲಕರು,. ನಗರದ ಸಾರಿಗೆ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಸಾರಿಗೆ ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಆಟೋಚಾಲಕರು, ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಉಚ್ಚ ನ್ಯಾಯಾಲಯದ ಆದೇಶಗಳನ್ನು ಪಾಲನೆಯಾಗುತ್ತಿದ್ದರೂ ಹೊಸಪೇಟೆ ಸಾರಿಗೆ ಕಚೇರಿಯಲ್ಲಿ ಆದೇಶ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಆಟೋ ಚಾಲಕರ ಮುಖಂಡ ಕೆ.ಎಂ.ಸಂತೋಷ ಮಾತನಾಡಿ, ಕೇಂದ್ರ ಸರ್ಕಾರದ ಆದೇಶದಂತೆ ವಾಹನಗಳ ಯೋಗ್ಯತಾ ಪ್ರಮಾಣಪತ್ರ ನೀಡುವಾಗ ಅವಧಿ ಮುಗಿದ ದಿನದಿಂದ ರೂ.50 ದಂಡ ವಿಧಿಸಲಾಗುತ್ತಿದೆ. ಕರ್ನಾಟಕ ಉಚ್ಚ ನ್ಯಾಯಾಲಯವು 4 ವಾರಗಳ ಕಾಲ ಯಾವುದೇ ದಂಡ ವಿಧಿಸದಂತೆ ರಾಜ್ಯದ ಎಲ್ಲಾ ಸಾರಿಗೆ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿರುವ ಇಲ್ಲಿನ ಸಾರಿಗೆ ಅಧಿಕಾರಿಗಳು ಸಿಕ್ಕಾ ಪಟ್ಟೆ ದಂಡ ವಿಧಿಸುವುದನ್ನು ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಉಚ್ಚ ನ್ಯಾಯಾಲಯದ ಆದೇಶ ಮತ್ತು ಸಾರಿಗೆ ಆಯುಕ್ತರ ಆದೇಶ ಪಾಲಿಸಿಬೇಕು. ಹೊಸಪೇಟೆ ಸಾರಿಗೆ ಇಲಾಖೆಯ ವ್ಯಾಪ್ತಿಯ ಎಲ್ಲಾ ವಾಹನಗಳನ್ನು 1989ರ ಮೋಟಾರ್ ಕಾಯ್ದೆ ಅನ್ವಯ 100 ರೂ. ದಂಡ ಸ್ವೀಕರಿಸಿ ಅರ್ಹತಾ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಜಿ.ಸಿದ್ದಲಿಂಗೇಶ ಎಸ್.ಅನಂತಶಯನ, ಎಂ.ನಾಗರಾಜ, ಕೆ.ಮೂರ್ತಿ, ಎಲ್.ರವಿ, ನರಸಯ್ಯ ಇದ್ದರು.

LEAVE A REPLY

Please enter your comment!
Please enter your name here