ಆಟೋ ಪಲ್ಟಿ ನಾಲ್ವರಿಗೆ ಗಂಭೀರ ಗಾಯ..

0
147

ಮಂಡ್ಯ/ಮಳವಳ್ಳಿ: ದೇವಸ್ಥಾನದ ಪೂಜೆ ಮುಗಿಸಿ ಕೊಂಡು ವಾಪಸ್ಸು ಬರುತ್ತಿದ್ದ ಆಟೋ ಒಂದು ಪಲ್ಟಿ ಹೊಡೆದ ಪರಿಣಾಮ ನಾಲ್ವರು ಗಂಭೀರ ಗಾಯ ಗೊಂಡಿರುವ ಘಟನೆ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಸವನಬೆಟ್ಟ ತಿರುವಿನಲ್ಲಿನ ಬಳಿ ಜರುಗಿದೆ.ತಿಮ್ಮೇಗೌಡ, ಜಯಮ್ಮ, ಐಶ್ವರ್ಯ, ಲಕ್ಷ್ಮೀಸಾಗರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಹಲಗೂರಿನಲ್ಲಿ ಆಸ್ವತ್ರೆ ಇದ್ದರೂ ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ದೊರಯದೆ ಗಾಯಾಳುಗಳು ಪರಾದಾಡುವಂತಾಯಿತು. ಈ ಬಗ್ಗೆ ಸಾರ್ವಜನಿಕರು ಆಸ್ವತ್ರೆಯ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿಸಿದರೂ ಆಂಬ್ಯುಲೆನ್ಸ್ ಬರುವುದು ಎರಡು ಗಂಟೆ ತಡವಾಯಿತು ಎಂಬ ಆರೋಪ ಮಾಡಿದರು.
ತಡವಾಗಿ ಬಂದ ಆಂಬ್ಯುಲೆನ್ಸ್‌ನಲ್ಲೇ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಯಿತು.

ಅಪಘಾತದ ಬಗ್ಗೆ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here