ಆಣೆ ಪ್ರಮಾಣ ಮಾಡಿಸಿದರೇ. ಮಾಜಿ ಸಚಿವ ರೆಡ್ಡಿ ?

0
949

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮಗೆ ಮತ ನೀಡಬೇಕು ಎಂದು ಆಣೆ ಪ್ರಮಾಣ ಮಾಡಿಸಿದರೇ. ಮಾಜಿ ಸಚಿವ ಕರುಣಾಕರ್ ರೆಡ್ಡಿ ?

ಬಳ್ಳಾರಿ./ ಬಳ್ಳಾರಿ:ಮಾಜಿ ಸಚಿವ ಕರುಣಾಕರ್ ರೆಡ್ಡಿ ಚುನಾವಣಾ ಕಣಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಬಳ್ಳಾರಿಯ ನಿವಾಸದಲ್ಲಿ ಕಳೆದೆರಡು ತಿಂಗಳುಗಳಿಂದ ಒಂದೊಂದು ಸಮುದಾಯದ ಸಭೆ ನಡೆಸುತ್ತಿದ್ದಾರೆ. ಇಂದು ತಮ್ಮ ಬಳ್ಳಾರಿಯ ನಿವಾಸದಲ್ಲಿ ಉಪ್ಪಾರ ಸಮುದಾಯದ ಜನರ ಸಭೆ ನಡೆಸಿದ ಕರುಣಾಕರ್ ರೆಡ್ಡಿ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮಗೆ ಮತ ನೀಡಬೇಕು ಎಂದು ಆಣೆ ಪ್ರಮಾಣ ಮಾಡಿಸಿದ್ದಾರೆ. ಬಳ್ಳಾರಿಯ ತಮ್ಮ ನಿವಾಸದಲ್ಲಿ ಇಂದು ಹರಪನಹಳ್ಳಿ ಕ್ಷೇತ್ರದ ಮತದಾರರ ಸಭೆ ನಡೆಸಿದ ಕರುಣಾಕರ್ ರೆಡ್ಡಿ ಉಪ್ಪಾರ ಸಮುದಾಯದ ಜನರ ಸಭೆ ನಡೆಸಿ, ಆಣೆ ಪ್ರಮಾಣ ಮಾಡಿಸಿದ್ದಾರೆ. ಜನರೇ ತಾವಾಗಿಯೇ ಬಂದು ನನಗೆ ತಾವು ಹರಪನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡ್ಕೊಳ್ತಾ ಇದ್ದಾರೆ. ನಾನೇನು ಯಾರನ್ನು ಬರಲು ಹೇಳ್ತಿಲ್ಲ ಎಂದು ಪ್ರತಿಬಾರಿಯೂ ಹೇಳ್ತಾರೆ ರೆಡ್ಡಿ.ಆದರೆ ವಾರಕ್ಕೊಮ್ಮೆ ಒಂದು ಸಮುದಾದಯ ಸಭೆ ನಡೆಸುತ್ತಿರುವುದು ಮುಂಬರುವ ಚುನಾವಣೆಗೆ ಎಲ್ಲ ತಯಾರಿ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

LEAVE A REPLY

Please enter your comment!
Please enter your name here