ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧ ದಂಪತಿ..?

0
149

ಬಳ್ಳಾರಿ /ಹೊಸಪೇಟೆ:ತಮಗೆ ಇನ್ನು ಬದುಲಿಕ್ಕೆ ಏನೂ ಇಲ್ಲ. ಯಾತಕ್ಕಾಗಿ ಜೀವಂತ ಇರಬೇಕು? ಅಂತ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧ ದಂಪತಿಯನ್ನು ಯುವಸೇನಾ ಸಂಘ ರಕ್ಷಿಸಿ ಮಾನವೀಯತೆ ಮೆರೆದಿದೆ.
ಹೊಸಪೇಟೆಯ 70 ವರ್ಷದ ವೃದ್ಧ ದಂಪತಿ ರಾಮಣ್ಣ ಮತ್ತು ರೇಣುಕಮ್ಮ ಸಾಯಲೆಂದು ರೇಲ್ವೆ ಹಳಿಗೆ ತಲೆ ಕೊಡಲು ಯತ್ನಿಸಿದ್ದರು.
ತಮಗೆ ಮಕ್ಕಳಿಲ್ಲ, ಅರ್ಜಿ ಸಲ್ಲಿಸಿದರೂ ಸರಕಾರ ವೃದ್ಧಾಪ್ಯ ವೇತನ ಕೊಡಲಿಲ್ಲ ಎಂದು ಜಿಗುಪ್ಸೆಯಿಂದ ಆತ್ಮಹತ್ಯೆಗೆ ಮುಂದಾಗಿದ್ದ ಈ ಹೊಸಪೇಟೆಯ ವೃದ್ಧ ದಂಪತಿಗಳನ್ನು ಸಕಾಲದಲ್ಲಿ ನೋಡಿದ ಯುವಸೇನಾ ಶಕ್ತಿ ಸಂಘದ ಸದಸ್ಯರು ತಡೆದು ಬಳ್ಳಾರಿಯಲ್ಲಿನ ಭಿಕ್ಷುಕರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

ರಾಮಣ್ಣ ಮತ್ತು ರೇಣುಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದ ವೃದ್ಧ ದಂಪತಿಗಳಿಗೆ ಅಂತ್ಯೋದಯ ಪಡಿತರ ಚೀಟಿಯೊಂದನ್ನು ಹೊರತುಪಡಿಸಿದರೆ, ವಾಸಕ್ಕೆ ಸೂರಿಲ್ಲ. ಗಾರೆ ಕೆಲಸ ಮಾಡುತ್ತಿದ್ದ ರಾಮಣ್ಣ ವಯೋಸಹಜ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದ. ಅವರಿವರ ಮನೆಯಲ್ಲಿ ಕೆಲಸ ಮಾಡಿ ರೇಣುಕಮ್ಮ ಪತಿಯ ಆರೈಕೆ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here