ಆಧಾರ್‌ನಿಂದ ಪೋಷಕರ ಮಡಿಲು ಸೇರಿದ್ದಾರೆ ಮೂವರು ಮಕ್ಕಳು.

0
161

ಬಳ್ಳಾರಿ:ಆಧಾರ್ ನೋಂದಣಿ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ಕಡ್ಡಾಯ. ಜೊತೆಗೆ ಗುರುತಿನ ಚೀಟಿಯಾಗಿ ಬಳಕೆ ಮಾಡಲು ಈಗ ಇದು ಹೆಚ್ಚಿನದಾಗಿ ಬಳಕೆಯಾಗುತ್ತಿದೆ. ಅಲ್ಲದೆ ಆಧಾರ್ ನೋಂದಣಿಯಿಂದ ಕಳೆದ ಹಲವು ವರ್ಷಗಳಿಂದ ಕಾಣೆಯಾಗಿದ್ದ ಈ ಮಕ್ಕಳು ಪೋಷಕರ ಮಡಿಲು ಸೇರುವಂತಾಗಿದೆ.

ಮೂವರು ಮಕ್ಕಳು ಕಳೆದ ಹಲವು ವರ್ಷಗಳಿಂದ ದೂರವಿದ್ದು ಇಂದು ಬಳ್ಳಾರಿಯಲ್ಲಿ ತಮ್ಮ ಪೋಷಕರ ಮಡಿಲನ್ನು ಸೇರಿದ್ದಾರೆ. ಇದಕ್ಕೆ ಆಧಾರ್ ಸಂಖ್ಯೆಯೇ ಕಾರಣವಾಗಿದೆ.
ನಗರದ ಸರ್ಕಾರಿ ಅನಾಥಾಶ್ರಮದಲ್ಲಿದ್ದ ಮಕ್ಕಳನ್ನು ಕಳೆದ ಮೇ 28 ರಂದು ಆಧಾರ್ ನೋಂದಣಿಗಾಗಿ ಮಕ್ಕಳ ಸಂರಕ್ಷಣಾ ಸಮಿತಿ ಬೆಂಗಳೂರಿಗೆ ಕರೆದುಕೊಂಡು ಹೋಗಿತ್ತು. ಆಧಾರ್ ನೋಂದಣಿಯ ಪ್ರಾದೇಶಿಕ ಕಚೇರಿಯಲ್ಲಿ ಇವರನ್ನು ಆಧಾರ್‌ಗೆ ನೋಂದಣಿ ಮಾಡಲು ಮುಂದಾದಾಗ ಆಧಾರ್ ತಂತ್ರಾಂಶ ನಿರಾಕರಿಸಿತು. ಆಗ ಅಧಿಕಾರಿಗಳು ಇವರ ಬೆರಳಿನ ಮತ್ತು ಕಣ್ಣಿನ ಪೊರೆಯ ಬಯೋಮೆಟ್ರಿಕ್ ಪಡೆದು ಈ ಮೊದಲು ಇವರು ಎಲ್ಲಿ ಆಧಾರ್‌ಗೆ ನೋಂದಣಿ ಮಾಡಿದ್ದಾರೆಂಬುದನ್ನು ಪತ್ತೆ ಹಚ್ಚಿದ್ದಾರೆ
ಇದರಿಂದ ಬಳ್ಳಾರಿಯ ಅನಾಥಾಶ್ರಮಕ್ಕೆ ಕಳೆದ 2016 ಅಕ್ಟೋಬರ್ 26ರಂದು ಸೇರಿದ 14 ವರ್ಷದ ಬೋಯಿನ ಕಲ್ಯಾಣ್ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಗ್ರಾಮದವನೆಂದು ಪತ್ತೆಯಾಗಿದೆ.
ಕಳೆದ 2012 ಅಕ್ಟೋಬರ್ 20ರಂದು ಸೇರಿದ್ದ 17 ವರ್ಷದ ಬಿ.ಬಾಬು ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಪಲಮನೇರ್ ಗ್ರಾಮದವನೆಂದು ಆತನ ಮೂಲ ಹೆಸರು ಟಿ.ಐ.ಎಂ.ಡಿ ಅಹಿತಿಸ್ಮ ಎಂದು ತಿಳಿದು ಬಂದಿದೆ.
ಕಳೆದ 2015 ಸೆ. 15ರಂದು ಸೇರಿದ್ದ 17 ವರ್ಷದ ರಾಜು ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ಕೊಟ್ಚಿರ ಗ್ರಾಮದವ. ಹಾಗೂ ಆತನ ಮೂಲ ಹೆಸರು ಬತ್ತುಲವಾರ್ ಮಾಧವ್ ರಾಜಣ್ಣ ಎಂದು ತಿಳಿದಿದೆ. ಪೋಷಕರಿಗೆ ಮಾಹಿತಿ ನೀಡಿದಾಗ ಅವರು ತಮ್ಮ ಮಕ್ಕಳು ನಾಪತ್ತೆಯಾಗಿದ್ದರ ಬಗ್ಗೆ ಅದೇ ದಿನಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದು ಸಹ ಖಾತರಿಯಾಗಿದೆ. ಈ ಕಾರಣಕ್ಕೆ ಆಧಾರ್ ಕಾರ್ಡ್ ಕಾರಣಕ್ಕೆ ಇಂದು ಈ ಮೂವರು ಮಕ್ಕಳು ಪೊಷಕರ ಮಡಿಲು ಸೇರಿದ್ದಾರೆ.

LEAVE A REPLY

Please enter your comment!
Please enter your name here