ಆನ್‌ಲೈನ್ ಔಷಧ ಮಾರಟವನ್ನು ರದ್ಧುಗೊಳಿಸುವಂತೆ ಆಗ್ರಹ

0
298

ಬಳ್ಳಾರಿ /ಹೊಸಪೇಟೆ: ಆನ್‌ಲೈನ್ ಔಷಧ ಮಾರಟವನ್ನು ರದ್ಧುಗೊಳಿಸಬೇಕು ಎಂದು ಆಗ್ರಹಿಸಿ, ಹೊಸಪೇಟೆ ಔಷಧಿ ಮಾರಟಗಾರರ ಸಂಘದ ತಾಲ್ಲೂಕು ಘಟಕದವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಆಲ್ ಇಂಡಿಯಾ ಆರ್ಗೆನೈಜೀಷನ್ ಆಫ್ ಕೆಮಿಸ್ಟಿ ಡ್ರಗ್ಗಿಷ್ಟ್ ಹಾಗೂ ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘ ರಾಜ್ಯ ವ್ಯಾಪಿ ಕರೆ ನೀಡಿದ್ದ ಮುಷ್ಕರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ನಗರದೆಲ್ಲ ಔಷಧ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಔಷಧ ವ್ಯಾಪಾರಿಗಳು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನೆಕಾರರು, ಬಳಿಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here