ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

0
256

ಬಳ್ಳಾರಿ/ಬಳ್ಳಾರಿ:ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಹೇಳಿದರು.

56 ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಅಂಗವಾಗಿ ಎ.ಎಸ್.ಎಂ ಮಹಿಳಾ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಔಷಧ ವಿಜ್ಞಾನ ಕ್ಷೇತ್ರದ ವೃತ್ತಿಯಲ್ಲಿರುವ ಫಾರ್ಮಸಿಸ್ಟ್‍ರು, ಔಷಧ ಸಂಶೋಧನೆ ಮಾಡಿ ನಿಖರ ಔಷಧಿ ವಿತರಿಸುವ ಇವರು ವೈದ್ಯ ಮತ್ತು ರೋಗಿಯ ಮಧ್ಯೆ ಕೊಂಡಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ. ಫಾರ್ಮಸಿಸ್ಟ್ ಆಗಿ ತಮ್ಮ ಸೇವೆ ಮತ್ತು ಕರ್ತವ್ಯದ ಬಗ್ಗೆ ಹೆಮ್ಮೆ ಪಡಬೇಕು ಹಾಗೂ ಫಾರ್ಮಸಿಸ್ಟ್ ಸೇವೆ ಅತ್ಯಮೂಲ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿಜಯ ನಗರ ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ|| ಪ್ರಭಂಜನ್ ಕುಮಾರ್ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಸಿಸ್ಟರ ಪ್ರಾಮುಖ್ಯತೆ ತಿಳಿಸಿ, ಫಾರ್ಮಸಿಸ್ಟ್‍ರು ಶ್ರದ್ಧೆ ಮತ್ತು ಸೇವಾ ಮನೋಭಾವ ಹೊಂದಿದ್ದಾರೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್ ಮಾತನಾಡಿ, ಸಂಘಟರಿಗೆ ಶುಭ ಕೋರಿದರು.ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಸಾಗರ್ ಆಸ್ಪತ್ರೆ ಸಮೂಹದ ಸೀನಿಯರ್ ಜನರಲ್ ಮ್ಯಾನೇಜರ್ ಜಯಪ್ರಕಾಶ ವಸ್ತ್ರದ, ಫಾರ್ಮಸಿಸ್ಟ್ ರವರ ಕರ್ತವ್ಯಗಳು, ಮೌಲ್ಯಯುತವಾದ ಸೇವೆಗಳು, ರೋಗಿಗಳ ಜೊತೆಗೆ ಸಮಾಲೋಚನೆಯೊಂದಿಗೆ ನಿಖರವಾಗಿ ಔಷಧಿಗಳ ವಿತರಣೆಗಳ ಬಗ್ಗೆ ತಿಳಿಸಿದರು. ಫಾರ್ಮಸಿ ಪ್ರಾಕ್ಟಿಸ್ ವಿಷಯಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಮಂಡಿಸಿದರು. ಡಾ.ಆರ್.ಎಲ್.ಎನ್.ಮೂರ್ತಿ ಪರಿಚಯಿಸಿದರು.ಟಿ.ವಿ.ಎಂ. ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಸಹಾಯಕ ಔಷಧ ನಿಯಂತ್ರಕ ಶಂಕರ್ ಜ್ಯೋತಿ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಯಲ್ಲಿ ಫಾರ್ಮಸಿಯ ಮಹತ್ವ, ಫಾರ್ಮಸಿಸ್ಟ್ ವೃತ್ತಿ ಮತ್ತು ಶಿಕ್ಷಣ ವ್ಯವಸ್ಥೆ ಹಾಗೂ ಅದರ ಮೌಲ್ಯಗಳ ಬಗ್ಗೆ ಟಿ.ವಿ.ಎಂ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ|| ಮಂಜುನಾಥ್ ಜಾಲಿ ತಿಳಿಸಿದರು.

LEAVE A REPLY

Please enter your comment!
Please enter your name here