ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒಲವು .

0
370

ಶಿಡ್ಲಘಟ್ಟ :ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಒಲವನ್ನು ನೀಡಿ ನಿರುದ್ಯೋಗಿಗಳಿಗೆ  ಕೌಶಲ್ಯಾಭಿವೃಧ್ಧಿ ತರಬೇತಿಗಳನ್ನು ನೀಡುವ ಮೂಲಕ ಸ್ವಯಂಉದ್ಯೋಗಿಗಳಾಗಿ ಜೀವನ ನಡೆಸಲು ಎಸ್ ಎನ್ ಕ್ರಿಯಾ ಟ್ರಸ್ಟ್ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡಲಾಗುತ್ತದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಹೇಳಿದರು.

ತಾಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ವಸತಿ ಮಾದರಿ ಶಾಲೆಯಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆ ಹಾಗೂ ಆನೂರಿನ ಎಸ್.ಎನ್.ಕ್ರಿಯಾ ಟ್ರಸ್ಟ್ ನ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರ ದುಡಿಮೆಯಿಂದಾಗಿ ಬಡ ಜನರು ಕಾಲ ಕಾಲಕ್ಕೆ ಸಮಯದ ಕೊರತೆಯಿಂದ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ  ಅನಾರೋಗ್ಯದಿಂದ ತುತ್ತಾಗುತ್ತಿದ್ದಾರೆ.  ಹಳ್ಳಿಗಾಡಿನ ಜನರಿಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅಗತ್ಯವಾಗಿದೆ. ಈ ಶಿಬಿರದಲ್ಲಿ ಮೂಳೆ ತಜ್ಞರು, ಕಣ್ಣಿನ ತಜ್ಞರು, ಸ್ತ್ರೀ ರೋಗ ತಜ್ಞರು, ದಂತ ವೈದ್ಯರು, ನರರೋಗ ತಜ್ಞರು, ಮಕ್ಕಳ ತಜ್ಞರು, ಹಾಜರಿದ್ದು ಅದರ ಸದುಪಯೋಗ ಪಡೆಯಬೇಕು

ತಾಲ್ಲೂಕಿನಲ್ಲಿ ವಿವಿಧ ಸ್ಥಳಗಳಲ್ಲಿ ನಮ್ಮ ಸಂಸ್ಥೆಯು ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದ್ದು, ಬಡ ಜನರಿಗೆ ಉತ್ತಮ ಆರೋಗ್ಯ ನೀಡುವುದರಲ್ಲಿ ಯಶಸ್ವಿಯಾಗಿದೆ . ಸಾಮಾಜಿಕ ಭದ್ರತೆ ಯೋಜನೆಯಡಿ ವಿಧವೆಯರು,ವಯೋವೃಧ್ಧರಿಗೆ ಮಾಶಾಸನ ಒದಗಿಸಲು ಅಗತ್ಯ ನೆರವು ನೀಡಲಾಗಿದೆ ಆರೋಗ್ಯ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿದ್ದರಿಗೆ ಅತ್ಯಾಧುನಿಕ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಕಣ್ಣಿನ ಚಿಕಿತ್ಸೆಯಲ್ಲಿಅಗತ್ಯವುಳ್ಳವರಿಗೆ  ಕನ್ನಡಕವನ್ನು ಉಚಿತವಾಗಿ ನೀಡಲಾಯಿತು.

ಆರೋಗ್ಯ-ಶಿಕ್ಷಣ ಕ್ಷೇತ್ರದತ್ತ ಹೆಚ್ಚು ಗಮನಹರಿಸಿ ನಂತರ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃಧ್ಧಿ ತರಬೇತಿಗಳನ್ನು ನೀಡುವ ಮೂಲಕ ಸ್ವಯಂಉದ್ಯೋಗಿಗಳಾಗಿ ಜೀವನ ನಡೆಸಲು ಟ್ರಸ್ಟ್ ನ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡಲಾಗಿದೆ ಸಾಮಾಜಿಕ ಭದ್ರತೆ ಯೋಜನೆಯಡಿ ವಿಧವೆಯರು,ವಯೋವೃಧ್ಧರಿಗೆ ಮಾಶಾಸನ ಒದಗಿಸಲು ಅಗತ್ಯ ನೆರವು ನೀಡಲಾಗಿದೆ ಆರೋಗ್ಯ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿದ್ದರಿಗೆ ಅತ್ಯಾಧುನಿಕ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಕಾಯ೯ಕ್ರಮದಲ್ಲಿ ಆನೂರು ನಟರಾಜ್,ದೇವರಾಜ್,ಮಳಮಾಚನಹಳ್ಳಿ ಬೈರೇಗೌಡ,ಟಿಪ್ಪು ಸೆಕ್ಯೂಲರ್ ಸೇನೆಯ ಅಧ್ಯಕ್ಷ ಮೌಲಾ,ಬಾಗಲೂರು ಶಬ್ಬೀರ್ ಹಾಗೂ ಎಂ.ವಿ.ಜೆ.ಆಸ್ಪತ್ರೆಯ ವಿವಿಧ ವಿಭಾಗಗಳ 30 ಮಂದಿ ತಜ್ಞ ವೈದ್ಯರು ಮತ್ತು ಸಿಬ್ಬಂದಿ,ಆನೂರಿನ ಎಸ್.ಎನ್.ಕ್ರಿಯಾ ಟ್ರಸ್ಟ್ ನ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here