ಆರೋಗ್ಯ ಶಿಬಿರಗಳನ್ನು ಸದ್ಭಳಕೆ ಮಾಡಿಕೊಳ್ಳಿ

0
141

ಚಿಕ್ಕಬಳ್ಳಾಪುರ/ಗುಡಿಬಂಡೆ: ದುಬಾರಿ ವೈದ್ಯಕೀಯ ಸೇವೆಗಳನ್ನು ಬಡ ಜನರಿಗೂ ಉಚಿತವಾಗಿ ದೊರೆಯಬೇಕೆಂಬ ಹಿತದೃಷ್ಠಿಯಿಂದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನಡೆಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ಡಾ.ಅಂಜನಪ್ಪ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಉಚಿತ ಮೂಳೆ ಸಾಂದ್ರತೆ ಹಾಗೂ ಮಧುಮೇಹ ರೋಗಿಗಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಕ್ಕರೆ ಕಾಯಿಲೆ, ಮೂಳೆಗಳ ಸವೆತ ಮುಂತಾದುವು ದೇಹದಲ್ಲಿ ಉತ್ಪತ್ತಿಯಾದ ಬಹಳ ದಿನಗಳ ನಂತರ ಅರಿವಿಗೆ ಬರುತ್ತದೆ. ಹೀಗಾಗಿ ನಿಗದಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಲ್ಲಿ ಅಪಾಯದಿಂದ ಪಾರಾಗಬಹುದು. ಗ್ರಾಮೀಣ ಪ್ರದೇಶದಲ್ಲಿನ ಬಡ ರೋಗಿಗಳಿಗೆ ದೂರದ ನಗರ ಅಥವಾ ಪಟ್ಟಣಗಳಿಗೆ ತೆರಳಿ ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುವುದು ಅಸಾಧ್ಯ. ಇದನ್ನು ಮನಗಂಡ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇಂಥಹ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸಮೀಪದ ಆಸ್ಪತ್ರೆಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಉಚಿತ ಸೇವೆಯನ್ನು ನೀಡುತ್ತಿವೆ.ಅರ್ಹರು ಇದರ ಉಪಯೋಗವನ್ನು ಪಡೆಬೇಕೆಂದರು.

ಈ ವೇಳೆ ಮಾತನಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಮಮೂರ್ತಿ, ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಇಂದಿನ ಶಿಬಿರದ ಆಯೋಜಕರಾದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾದದ್ದು. ಸಾವಿರಾರು ರೂಗಳನ್ನು ವೆಚ್ಚ ಮಾಡಿ ಶ್ರಮ ಪಟ್ಟು ಪಡೆಯಬೇಕಾದ ಚಿಕಿತ್ಸೆಗಳನ್ನು ಉಚಿತವಾಗಿ ಶಿಬಿರ ಏರ್ಪಡಿಸುವ ಮೂಲಕ ಬಡವರ ಮನೆಬಾಗಿಲಿಗೆ ತಲುಪಿಸುತ್ತಿರುವ ಟ್ರಸ್ಟ್ ನ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವನೆ ಹೀಗೆ ಮುಂದುವರೆಯಲಿ. ಸಾವಿರಾರು ರೂಗಳನ್ನು ವೆಚ್ಚ ಮಾಡಿ ಆಯೋಜಿಸುವ ಈ ಶಿಬಿರಗಳ ಪ್ರಯೋಜನವನ್ನು ಅರ್ಹರು ತಪ್ಪದೇ ಪಡೆದಾಗ ಮಾತ್ರ ಸಾರ್ಥಕತೆ ಉಂಟಾಗುತ್ತದೆ ಎಂದರು.

ಶಿಬಿರದಲ್ಲಿ ತಜ್ಞ ವೈದ್ಯರಿಂದ ೮೫ ಮಂದಿಗೆ ತಪಾಸಣೆ ನಡೆಸಿ ೧೦ ಸಾವಿರ ರೂಗಳ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಹಿರಿಯ ಸಮಾಜ ಸೇವಕ ಆರ್.ಸೂರ್ಯಪ್ರಕಾಶ್, ಶಿಬಿರದ ಸ್ವಯಂ ಸೇವಕರಾದ ಚೆಂಡೂರು ಮೂರ್ತಿ, ಆಶ್ರಯ ಸಮಿತಿ ಸದಸ್ಯರಾದ ಅನಂತಕುಮಾರ್, ಸುಲೇಮಾನ್ ಖಾನ್ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here