ಆರೋಪ ನಿರಾಧಾರ, ಅಭಿವೃದ್ದಿ ಸಹಿಸದೆ ಪ್ರತಿಭಟನೆ

0
389

ಬೆಂ,ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರಸಭೆ ಆಡಳಿತ ಮತ್ತು ಬಿಜೆಪಿ ಪಕ್ಷದ ಅಧ್ಯಕ್ಷರ ಅಧಿಕಾರದಲ್ಲಿ ನಗರಸಭೆ ಭ್ರಷ್ಟಕೂಟವಾಗಿ ಪರಿವರ್ತನೆ ಗೊಂಡಿದೆ ಎಂದು ಆರೋಪಿಸಿ ಕನ್ನಡಪಕ್ಷ ಹಾಗೂ ಜೆಡಿಎಸ್ನ ನಾಲ್ಕಾರು ಸದಸ್ಯರು ಮಾಡಿದ ಪ್ರತಿಭಟನೆ ಕೇವಲ ಅವರ ಪ್ರಚಾರಕ್ಕೆ ಮಾತ್ರ ನಮ್ಮ ಮೇಲಿನ ಭ್ರಷ್ಟಾಚಾರದ ಆರೋಪ ನಿರಾಧಾರ ಎಂದು ನಗರಸಭಾ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಆರೋಪ ತಳ್ಳಿಹಾಕಿದ್ದಾರೆ.

ಅಧಿಕಾರ ಕಳೆದು ಕೊಂಡು ಹತಾಶೆ ಮನಸ್ಥಿತಿಯಲ್ಲಿರುವ ಅವರು ನಮ್ಮ ಆಡಳಿತ ಮತ್ತು ಅಭಿವೃದ್ಧಿಯನ್ನು ಸಹಿಸದೆ ಪ್ರತಿಭಟನೆ ಮಾಡಿ ನಮ್ಮ ತೇಜೋವಧೆಗೆ ಪ್ರಯತ್ನಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೇವಲ ಐದಾರು ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಅಕ್ರಮ ಎಸಗಿರುವ ಆರೋಪ ನಮ್ಮ ಮೇಲೆ ಹೊರಸಿದರೆ ಅದು ಸತ್ಯಕ್ಕೆ ದೂರವಾದ್ದು, ಅವರ ಎರಡೂವರೆ ವರ್ಷದ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮಗಳ ಪಟ್ಟಿ ದಾಖಲೆಗಳ ಸಮೇತ ನಮ್ಮಲ್ಲಿದೆ ಎಂದರು. ಅವರು ಬಯಸಿದ್ದೇ ಆದರೆ ಬಹಿರಂಗ ಚರ್ಚೆಗೆ ಸಿದ್ದರಾಗಲಿ ಅವರು ಮಾಡಿರುವ ಅಕ್ರಮಗಳ ದಾಖಲೆಗಳ ಸಮೇತ ಉತ್ತರಿಸಲು ನಾವು ಸಿದ್ದರಿದ್ದೇವೆ, ನಮ್ಮ ಅಕ್ರಮಗಳು ಇದ್ದಲ್ಲಿ ಅವರು ಸಾಬೀತು ಪಡೆಸಲಿ ಎಂದು ಸವಾಲ್ ಎಸೆದಿದ್ದಾರೆ.

LEAVE A REPLY

Please enter your comment!
Please enter your name here