ಆಲ್ಔಟ್ ಕುಡಿದು ಆತ್ಮಹತ್ಯೆಗೆ ಯತ್ನ.

0
284

ಬೆಂ,ಗ್ರಾಮಾಂತರ/ದೊಡ್ಡಬಳ್ಳಾಪುರ: ಕೇಸ್ ಬರೆದರು ಎಂದು ಅಲ್ ಔಟ್ ಕುಡಿದು ಖಾಸಗಿ ಆಸ್ಪತ್ರೆ ಪಾಲಾದ ಡ್ರೈವರ್ ಕಂ,ಕಂಡಕ್ಟರ್ ರಾಮು.

ಕೆಎಸ್ಆರ್ಟಿಸಿ ಚೆಕಿಂಗ್ ಇನ್ಸೆಪ್ಟರ್ ಸೋಮಸುಂದರ್ ಕಲೆಕ್ಸನ್ ಕಾಸುಕದ್ದ ಆರೋಪದ ಅಡಿಯಲ್ಲಿ ಡ್ರೈವರ್ ಕಂ,ಕಂಡಕ್ಟರ್ ರಾಮು ಹಳ್ಳಣ್ಣನವರ ಮೇಲೆ ಕೇಸು ಬರೆದರು ಎಂದು ನೊಂದ ರಾಮು ವಿಷಕುಡಿದು ಆತ್ಮಹತ್ಯೆಗೆ ಪ್ರತ್ನಿಸಿದ್ದಾರೆ ಎಂದು ಹೇಳಲಾಗಿದೆ. ವಿಷಕುಡಿಯಲು ಕಾರಣ ಅದಲ್ಲ ಆತನ ಮೇಲೆ ಕೇಸು ಬರೆದ ಚೆಕಿಂಗ್ ಇನ್ಸೆಪ್ಟರ್ ಸೋಮಸುಂದರ್ ರಾತ್ರಿ ತಂಗಿದ್ದ ಕೊಠಡಿಗೆ ಬೀಗ ಜಡಿದು ದಿಗ್ಬಂದನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರ ಹಿನ್ನಲೆಯಲ್ಲಿ ರಾಮು ಹಳ್ಳಣ್ಣನವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಚೆಕಿಂಗ್ ಇನ್ಸೆಪ್ಟರ್ ಸೋಮಸುಂದರ್ ಪ್ರಕರಣ ದಾಖಲು ಮಾಡಿಸಿದ್ದರಿಂದ ಬಯದಿಂದ ಆಲ್ ಔಟ್ ಕುಡಿದಿದ್ದಾನೆ ಎಂಬ ಮಾಹಿತಿ ಆತನ ಸಹಸಿಬ್ಬಂಧಿಗಳಿಂದ ಮತ್ತು ಡಿಪೊಮೇನೇಜರ್ ನರಸಿಂಹ ರೆಡ್ಡಿ ಕಡೆಯಿಂದ ತಿಳಿದು ಬಂದಿದೆ. ಆದರೆ ಇಲ್ಲಿನ ಕರವೇ ಕನ್ನಡುಗರ ಬಣದ ಹೋರಾಟಗಾರ ಬಿ ಎಸ್, ಚಂದ್ರಶೇಖರ್ ಮಾತ್ರ ಈ ಘಟನೆಗೆ ನೇರಹೊಣೆ ಡಿಪೊ ಮೇನೇಜರ್ ಎಂದು ಆರೋಪಿಸಿತ್ತಿದ್ದು,, ಚಿಕಿತ್ಸೆ ಪಡೆಯುತ್ತಿರುವ ರಾಮು ಹಳ್ಳಣ್ಣನವರ್ ಹೇಳಿಕೆಯಿಂದಷ್ಟೇ ಸತ್ಯಹೊರ ಬರಬೇಕಿದೆ.
ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಲ್ ಔಟ್ ಕುಡಿದ ರಾಮುರವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here