ಆಸ್ಪತ್ರೆಗೆ ಬೀಗ,ಅಂಬುಲೇನ್ಸಲ್ಲಿ ಮಗು ಜನನ…

0
438

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ದಿಬ್ಬೂರಹಳ್ಳಿ ಗ್ರಾಮದ ಲಕ್ಷ್ಮೀ ಅನಿಲ್ ಕುಮಾರ್ ಹೆರಿಗೆಗಾಗಿ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಳಗ್ಗೆ  7 ಘಂಟೆಗೆ ಬಂದಿದ್ದು ಆಸ್ವತ್ರೆಗೆ ಬಾಗಿಲು  ತೆಗೆಯದೆ ಬೀಗ ಹಾಕಿರುವ ದೃಷ್ಯ ಕಂಡು ಕಂಗಾಲಾದ ಗರ್ಭಿಣಿ. ಸುಮಾರು ಒಂದು ಘಂಟೆ ಸಮಯ ಕಾದರೂ ಸಹ ಯಾರು ಬರದೆ ಇದ್ದ ನಂತರ ಸಾದಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿಯೂ ಸಹ ಇದೇ ಪರಿಸ್ಥಿತಿ. ಹೆರಿಗೆ ನೋವಿನಲ್ಲೆ  ಶಿಡ್ಲಘಟ್ಟ ಆಸ್ವತ್ರೆಗೆ 108 ಅಬುಲೇನ್ಸ್ ಬಳಸಿ  ಹೊರಡುವ ಸಂದರ್ಭದಲ್ಲಿ ದಿಬ್ಬೂರಹಳ್ಳಿ ಮಾರ್ಗದ ಶಿಡ್ಲಘಟ್ಟ ರಸ್ತೆಯ 3 ಕಿಲೋಮೀಟರ್ ನಷ್ಟು ದೂರ  ಹೊರಟಾಗ ಆಂಬ್ಯೂಲೆನ್ಸ್ ನಲ್ಲಿಯೇ ಹೆರಿಗೆ ಆಯಿತು ಇವರಿಗೆ ಹೆಣ್ಣು ಮಗು ಜನನ ವಾಯಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದ ನಿರ್ಲಕ್ಷತನದಿಂದ ಹೆರಿಗೆ ಸಮಯದಲ್ಲಿ ಗರ್ಭಿಣಿ ಸಾವು ನೋವುಗಳ  ಮಧ್ಯೆ  ಸಂಕಷ್ಟಗಳನ್ನು ಅನುಭವಿಸುವಿಸು ಮಗುವಿಗೆ ಅಂಬುಲೇನ್ಸನಲ್ಲೆ ಜನನ  ನಿಡುವಂತ ಘಟನೆ ನಡೆಯಿತು.ಇದರ ಬಗ್ಗೆ ತಾಲ್ಲೂಕಿನ ಆಡಳಿತ ವೈದ್ಯಾಧಿಕಾರಿ ಅನಿಲ್ ಕುಮಾರ್ ರವರನ್ನು ದೂರವಾಣಿ ಮೂಲಕ ನಮ್ಮೂರು ಟಿವಿಯಿಂದ ಸಂಪರ್ಕಿಸಿದಾಗ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರೆತೆ ಇರುವುದರಿಂದ ಈ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಜಾರಿಕೆ ಉತ್ತರ ನೀಡಿ, ಇನ್ನು ಆಸ್ಪತ್ರೆ ಬಾಗಿಲು ಬೀಗ ಹಾಕಿರುವ ಬಗ್ಗೆ ವಿಚಾರಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು

LEAVE A REPLY

Please enter your comment!
Please enter your name here