ಆಸ್ಪತ್ರೆಯಲ್ಲಿ ಅಗ್ನಿ ಅವಘಡ..!?

0
164

ಬಳ್ಳಾರಿ /ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮತ್ತೆ ಆಕಸ್ಮಿಕ ಅಗ್ನಿ ಅನಾಹುತ ಸಂಭವಿಸಿದೆ. ಕೆಲ ತಿಂಗಳ ಹಿಂದೆಯಷ್ಠೆ ಬೆಂಕಿ ಬಿದ್ದ ಪ್ರಕರಣ ಮಾಸುವ ಮುನ್ಮವೇ ಮತ್ತೊಮ್ಮೆ ವಿಮ್ಸ್ ಆಸ್ಪತ್ರೆ ಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿಮ್ಸ್ ಆಸ್ಪತ್ರೆಯ ಮಕ್ಕಳ ವಾರ್ಡ ಪಕ್ಕದಲ್ಲಿರುವ ಹಳೆ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳೂ ಬೆಂಕಿಗೆ ತುತ್ತಾಗಿವೆ. ಹಳೆ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದ ಕಚ್ಚಾ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರುತ್ತಿದ್ದಂತೆ ಮಕ್ಕಳ ವಾರ್ಡನಲ್ಲಿದ್ದ ರೋಗಿಗಳು ಮತ್ತು ರೋಗಿಗಳ ಸಂಭದಿಕರು ಭಯಬೀತರಾಗಿ ವಾರ್ಡನಿಂದ ಹೊರ ಓಡಿ ಹೋಗಿದ್ದಾರೆ, ಅಲ್ಲದೇ ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸಹ ರೋಗಿಗಳು ಭಯಬೀತರಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದ್ರೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ
ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ, ಹೀಗಾಗಿ ಬೆಂಕಿಯಲ್ಲಿ ಹಳೆ ಸಾಮಗ್ರಿಗಳು ಕೆಲ ದಾಖಲೆಗಳು ಸುಟ್ಟು ಹೋಗಿವೆ. ಯಾವುದೇ ಪ್ರಾಣಾಪಾಯ ಸಂಬವಿಸಿಲ್ಲ. ಆದ್ರೆ ಪದೇ ಪದೇ ವಿಮ್ಸ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here