ಆಸ್ಪತ್ರೆಯಲ್ಲಿ ಮಕ್ಕಳ ಕಳ್ಳತನ ಜಾಲವಿದೆಯಾ.. ?

0
350

​ ಮಕ್ಕಳ ಕಳ್ಳಿಗೆ ಗೂಸ ಕೊಟ್ಟ ಪೊಲೀಸರಿಗೆ ಒಪ್ಪಿಸಿದ್ರು ಟೀ ಕುಡಿಸುವ ನೆಪದಲ್ಲಿ ಮಗುವಿನ ಕಳ್ಳತನ

 

ಬಳ್ಳಾರಿಯ: ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಕಳ್ಳತನದ ಜಾಲ ಸಕ್ರಿಯವಾಗಿ ಕೆಲಸ ಮಾಡುತ್ತಿದೆಯಾ ? ಇಲ್ಲಿ ಮಕ್ಕಳು ಸೇಫ್ ಇಲ್ವಾ ? ಹೌದು, ಹೀಗೊಂದು ಪ್ರಶ್ನೆ ಇಷ್ಟು ದಿನಗಳ ಕಾಲ ಕಾಡು ತ್ತಿತ್ತು. ಆದ್ರೇ,  ನಿನ್ನೆ ನಡೆದ ಘಟನೆ ಯೊಂದು ಅದನ್ನು ನಿಜ ಮಾಡಿದೆ.  ಪೋಷಕರಿಗೆ ಟೀ ಕುಡಿಸುವ ನೆಪದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು 6ದಿನದ ಹಸುಗೂಸನ್ನ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿಹಾಕಿ ಕೊಂಡಿದ್ದಾಳೆ. ಬಳ್ಳಾರಿಯ ವಿಮ್ಸ್ ನಲ್ಲಿ  ಪ್ರತಿದಿನ ಒಂದಲ್ಲೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಆದ್ರೇ, ನಿನ್ನೆ ನಡೆದ ಘಟನೆ ಇಡೀ ವ್ಯವಸ್ಥೆಯೇ ಬುಡ ಮೇಲು ಮಾಡುವಂತಿತ್ತು.. ಎರಗುಡಿ ಗ್ರಾಮದ ಶಿವಲಿಂಗಮ್ಮ ಮತ್ತು ನಾಗರಾಜ ದಂಪತಿಗಳಿಗೆ ಹದಿನಾಲ್ಕು ವರ್ಷದ ಬಳಿಕ ಮಗುವೊಂದು ಜನಿಸಿದೆ. ಮಗುವನ್ನು ಮಕ್ಕಳ ವಾರ್ಡಿನಲ್ಲಿ ಮತ್ತು ತಾಯಿಯನ್ನು ಬೇರೆಡೆ ಇರಿಸಲಾಗಿತ್ತು.  ಮಕ್ಕಳ ವಾರ್ಡಿ ನಲ್ಲಿ ಅತ್ತೆಯ ಜೊತೆ ಇದ್ದ ಮಗುವನ್ನು ಮಹಿಳೆ ಯೊರ್ವಳು ಟೀ ಕುಡಿಸಿ ಮತ್ತು (ಮೊಬ್ಬು) ಬರುವಂತೆ ಮಾಡಿ ಮಗುವನ್ನು ಎತ್ತಿ ಕೊಂಡು ಹೋಗಿದ್ದಾಳೆ. ಎರಡು ಕಡೆ ಹೋಮ್ ಗಾರ್ಡ್​ಗಳು ವಿಚಾರ ಮಾಡಿದ್ರು, ತಮ್ಮದೇ ಮಗು ಎಂದಿದ್ದಾಳೆ. ಆದ್ರೇ, ಕೊನೆಯಲ್ಲಿ ಹೊರಗೆ ಹೋಗುವಾಗ ಮತ್ತೊರ್ವ ಹೋಮ್ ಗಾರ್ಡ್​ಗೆ ಅನುಮಾನ ಬಂದು ವಿಚಾರಣೆ ಮಾಡಿದಾಗ ಕಳ್ಳಿ ಸಿಕ್ಕಿಹಾಕಿಕೊಂಡಿದ್ದಾಳೆ.

LEAVE A REPLY

Please enter your comment!
Please enter your name here