ಆಸ್ಪತ್ರೆಯ ಎದುರು ಪ್ರತಿಭಟನೆ..

0
173

ಜನಸಂಖ್ಯೆಗನುಗುಣವಾಗಿ 100 ಹಾಸಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ವೈದ್ಯರ ನೇಮಕ ಮಾಡಬೇಕು. ಅವೈಜ್ಞಾನಿಕವಾಗಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಡಿವೈಎಫ್‍ಐನಿಂದ ಧರಣಿ.ಸಾಮಾನ್ಯರ ಗೋಳು ಕೇಳುವವರಾರು.

ಬಳ್ಳಾರಿ/ಹೊಸಪೇಟೆ:ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯಲ್ಲಿ ಕೊರತೆ ಇರುವ ನೇತ್ರ ತಜ್ಞರು, ಚರ್ಮ ತಜ್ಞರು, ನರ ತಜ್ಞರು, ರೆಡಿಯಾಲಾಜಿಸ್ಟ್ ತಜ್ಞ ವೈದ್ಯರನ್ನು ನೇಮಿಸಿ, 250 ಹಾಸಿಗೆಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿ.ವೈ.ಎಫ್.ಐ) ಸರ್ಕಾರಿ ಆಸ್ಪತ್ರೆಯ ಎದುರು ಸೋಮವಾರ ಧರಣಿ ನಡೆಸಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹೊಂದಿವೆ. ಉಚಿತ ಚಿಕಿತ್ಸೆಗೆ ಹಣ ತೆರಬೇಕಾಗಿದೆ. ತಾಲೂಕಿನಾದ್ಯಂತ 4 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಜನಸಂಖ್ಯೆಗಳ ಅನುಗುಣವಾಗಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲವಾಗಿದೆ. ಅನೇಕ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಆಸ್ಪತ್ರೆಯು ಅನೇಕ ಅವ್ಯವಸ್ಥೆಯಿಂದ ಕೂಡಿದೆ. ಬಡವರಿಗೆ, ಮಧ್ಯವರ್ಗದವರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ತುರ್ತು ಚಿಕಿತ್ಸೆಗೆಂದು ಬಂದರೆ ಬಳ್ಳಾರಿ ಇಲ್ಲವೇ ಬೆಂಗಳೂರಿಗೆ ಕಳುಹಿಸುವುದು ಸಾಮಾನ್ಯವಾಗಿದೆ. ರಕ್ತ ಪರೀಕ್ಷಾ ಉಪಕರಣಗಳು, ಟಿ.ಬಿ.ನಾಬು, ಅಲ್ಪ್ರಾ ಸೌಂಡ್ ಉಪಕರಣ, ಸೇಲ್ ಕೌಂಟರ್ ಉಪಕರಣ, ಶವಗಾರ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಕೊರತೆ, ಪ್ರತಿ ವರ್ಷಕ್ಕೆ 2000 ಯೂನಿಟ್ ರಕ್ತ ಹೊರಗಡೆ ತಂದು ಹಾಕಲಾಗುತ್ತದೆ ಆದರೂ ರಕ್ತ ನಿಧಿ ಬ್ಯಾಕ್ ಇಲ್ಲ, ಸಿಟಿ ಸ್ಯಾನಿಂಗ್ ಉಪಕರಣವಿಲ್ಲ, ಆಧುನಿಕವಾದ ಲ್ಯಾಬ್ ಇಲ್ಲವಾಗಿದೆ, ಒಬ್ಬ ಶಸ್ತ್ರಚಿಕಿತ್ಸಕರು ಮಾತ್ರವೇ ಇರುವುದರಿಂದ ಚಿಕಿತ್ಸೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಲ್ಲದ್ದರಿಂದ ಖಾಸಗಿಯವರಿಗೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಚಿಕ್ಸಿತೆಯನ್ನು ಮಾಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಡಯಾಲಿಸಿಸ್ ಉಪಕರಣಗಳು ದುಸ್ಥಿತಿಯಲ್ಲಿವೆ. ಡಿ ಗ್ರೂಪ್ ನೌಕರರ ನೇಮಕಾತಿಯ ಕೊರತೆಯಿಂದ ಸ್ವಚ್ಘತೆಯೇ ಇಲ್ಲವಾಗಿದೆ. ಸರ್ಕಾರಿ ಆಸ್ಪತ್ರೆಯ ಅನೇಕ ಕೊರತೆ ಮತ್ತು ವೈಪಲ್ಯಗಳು ಖಾಸಗಿ ಆಸ್ಪತ್ರೆಗಳಿಗೆ ವರದಾನವಾಗಿದೆ. ಈಗಾಗಿ ಕೇಲ ಖಾಸಗಿ ಆಸ್ಪತ್ರೆಯ ವೈದ್ಯರು ಜನರಿಂದ ನಿಯಮ ಮೀರಿ ಚಿಕಿತ್ಸೆಯ ಹೆಸರಿನಲ್ಲಿ ಹಣ ಪಡೆಯುವುದು ಸಾಮಾನ್ಯವಾಗಿದೆ. ಸರಕಾರದ ನಿಯಮಗಳು ಖಾಸಗಿ ಆಸ್ಪತ್ರೆಗಳು ಗಾಳಿಗೆ ತೂರಿವೆ. ತಾವು ಕೊಡುವ ಚಿಕಿತ್ಸೆಗೆ ಎಷ್ಟು ಹಣವನ್ನು ಪಡೆಯುತ್ತೇವೆ ಎಂದು ಪ್ರದರ್ಶನ ಮಾಡುತ್ತಿಲ್ಲ, ಅಡ್ಮಿಟ್ ಆದ ರೋಗಿಗಳಿಗೆ ದಿನದ ಬೆಡ್ ಚಾರ್ಜ್ ಎಂದು ಕನಿಷ್ಠ 1000 ರೂ ಯಿಂದ 3000 ಸಾವಿರ ರೂಗಳ ವರೆಗೂ ವಸೂಲಿ ಮಾಡಲಾಗುತ್ತಿದೆ. ಯಾವುದೇ ವೈದ್ಯಕೀಯ ಅರ್ಹತೆ ಇಲ್ಲದೇ ಇರುವವರನ್ನು ಇಟ್ಟುಕೊಂಡು ಅವರಿಂದ ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಡಾ|| ಇಕ್ಬಲ್ ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮಕ್ಕಳನ್ನು ತಮ್ಮಲ್ಲಿಯೇ ಕರೆಸಿಕೊಂಡು ನೋಡಲಾಗುತ್ತಿದೆ. ಬಹುತೇಕ ಆಸ್ಪತ್ರೆಗಳು ಯಾವುದೇ ರಸೀದಿಗಳನ್ನು ಕೊಡುತ್ತಿಲ್ಲ. ರಾತ್ರಿ ಮೂರು ಗಂಟೆಗೆ ನಾಲ್ಕು ಗಂಟೆಗೆ ಟೊಕನ್ ಪಡೆಯಲು ಪೋಷಕರು ನಿದ್ದೆಗೆಡಬೇಕಿದೆ. ಹೀಗೇ ಅನೇಕ ಸಮಸ್ಯೆಗಳಿಗೆ ಸಾರ್ವಜನಿಕರು ತುತ್ತಾಗುತ್ತಿದ್ದರೂ ಕೇಳುವವರಿಲ್ಲದಂತಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶವ್ಯಕ್ತಿಪಡಿಸಿದರು.
ಬೇಡಿಕೆಗಳು: ಉಪವಿಭಾಗದ ಆಸ್ಪತ್ರೆಯನ್ನು 100 ಹಾಸಿಗೆ ಯಿಂದ 250 ಹಾಸಿಗೆಗೆ ಹೆಚ್ಚಿಸಬೇಕು. ವಿಶೇಷ ಬಜೆಟ್ ನೀಡಬೇಕು. ಹೊಸಪೇಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಬೇಕು. ಖಾಲಿ ಇರುವ ವೈದ್ಯಕೀಯ ಮತ್ತು ವೈದ್ಯಕೇತರ ಹುದ್ದೆಗಳನ್ನು ಕೂಡಲೇ ಭರ್ತಿಮಾಡಬೇಕು. ರಕ್ತ ನಿಧಿ ಬ್ಯಾಂಕ್‍ನ್ನು ಸ್ಥಾಪಿಸಬೇಕು.
ಶವಗಾರ ಕೇಂದ್ರವನ್ನು ಆಧುನಿಕರಣಗೊಳಿಸಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್, ಎಂ.ಆರ್.ಐ ಸ್ಕ್ಯಾನಿಂಗ್ ಉಪಕರಣಗಳನ್ನು ತಕ್ಷಣವೇ ಒದಗಿಸಬೇಕು. ಜೆನರಿಕ್ ಔಷ್ಯಧಿ ಮಳಿಗೆಯನ್ನು ತೆರೆಯಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ(ಕೆ.ಪಿ.ಎಂ.ಇ) ಕಾಯ್ದೆಯನ್ನು ತಕ್ಷಣವೇ ಅನುಷ್ಠಾನ ಮಾಡಲು ಸರ್ಕಾರ ಮುಂದಾಗಬೇಕು. ಖಾಸಗಿ ಆಸ್ಪತ್ರೆಗಳು ವಿಧಿಸುವ ಬೆಡ್ ಚಾರ್ಜ, ಚಿಕಿತ್ಸೆಯ ವೆಚ್ಚ, ರಕ್ತ ಮತ್ತು ಇತರೆ ಪರೀಕ್ಷೆ ಶುಲ್ಕವನ್ನು ಜಿಲ್ಲಾ ಆರೋಗ್ಯಧಿಕಾರಿಗಳು ಮತ್ತು ತಾಲೂಕು ಆರೋಗ್ಯಧಿಕಾರಿಗಳು ಕಾನೂನಿನ ನೀತಿ, ನಿರೂಪಣೆಗಳಿಗೆ ತಕ್ಕ ಹಾಗೇ ನಿರ್ಧರಿಸಬೇಕು. ಖಾಸಗಿ ವೈದ್ಯರು ವಿಧಿಸುವ ಚಾರ್ಜುಗಳ ಪಟ್ಟಿಯನ್ನು ಪ್ರಕಟಿಸಬೇಕು. ಹೊಸಪೇಟೆಯಲ್ಲಿ ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ದ ಕ್ರಮಕೈಗೊಳ್ಳಿ. ಖಾಸಗಿ ಆಸ್ಪತ್ರೆಗಳು ರವಿವಾರ ಸಹ ಕೆಲಸ ನಿರ್ವಣೆ ಮಾಡಲು ಆದೇಶ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸರ್ಕಾರ ನಿರ್ಲಕ್ಷ ತೊರಿದರೆ ಹೋರಾಟವನ್ನು ತೀವ್ರ ಗೊಳಿಸಲಾಗುತ್ತದೆ ಎಂದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್, ಕಾರ್ಯದರ್ಶಿ ಕಲ್ಯಾಣಯ್ಯ, ಸಂಘಟನೆಯ ವಿ.ಸ್ವಾಮಿ, ಕೆ.ರಮೇಶ, ಇ.ಮಂಜುನಾಥ,ಕೆ.ಎಂ.ಸಂತೋಷ್, ಪಂಪಾನಂದ, ಬಿ.ಟಿ.ಸೂರ್ಯಕಿರಣ ಇದ್ದರು.

LEAVE A REPLY

Please enter your comment!
Please enter your name here