ಆಸ್ಪತ್ರೆ ಮುಂದೆ ಪ್ರತಿಭಟನಾ ಧರಣಿ.

0
372

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ.

ಚಿಂತಾಮಣಿ ನಗರದ ಡೆಕ್ಕನ್ ಆಸ್ಪತ್ರೆಯು ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಹೆಚ್ಚಿನ ಶುಲ್ಕ ಮತ್ತು ಅಕ್ರಮ ವ್ಯವಹಾರಗಳನ್ನು ಖಂಡಿಸಿ ಈ ದಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ.

ಚಿಂತಾಮಣಿ ನಗರದ ಬಡ ದಲಿತ ಕದಿರಪ್ಪ ಎಂಬುವರ ಸಾವಿಗೆ ಕಾರಣರಾದ ಮತ್ತು ಇವರ ಸೊಸೆಯಾದ ರಾಧಮ್ಮ ಎಂಬ ಗರ್ಭಿಣಿ ಸ್ತ್ರೀಯ ಸಂಬಂಧಿಕರ ಅನುಮತಿ ಇಲ್ಲದೆ ಗರ್ಭಪಾತ ಮಾಡಿ ರೋಗಿಗಳ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಯನ್ನು ಅನುಸರಿಸಿ,ಸರ್ವಾಧಿಕಾರ ಮತ್ತು ರಾಜಕೀಯ ಬಂಬಲದಿಂದ ಸಾರ್ವಜನಿಕರ ಮತ್ತು ಬಡವರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದರೆ ಎಂದು ಧರಣಿ ಮಾಡಿದರು.

ಮತ್ತು ಇದನ್ನು ತಿಳಿದ ಈ ಮೇಲ್ಕಂಡ ಸಮಿತಿಯ ಪದಾಧಿಕಾರಿಗಳು ಇವರ ಈ ಧೋರಣೆಯನ್ನು ಪ್ರಶ್ನಿಸಿದಾಗ ಸಮಂಜಸವಾದ ಉತ್ತರ ನೀಡದೆ ದೌರ್ಜನ್ಯ ದಿಂದ ವರ್ತಿಸಿ ಕಳುಹಿಸಿರುತ್ತಾರೆ. ಇದರಿಂದ ಬೇಸತ್ತ ಮೇಲ್ಕಂಡ ಸಮಿತಿಯು ಮೇ 15ರಂದು ಕಾನೂನಾತ್ಮಕವಾಗಿ ಇವರ ಅಕ್ರಮ ಗಳನ್ನು ಖಂಡಿಸಿ ಪ್ರತಿಭಟನೆ ಮಾಡಿ,ಸಂಬಂಧಪಟ್ಟ ಅಧಿಕಾರಿಗಳು ಮನವಿಯನ್ನು ಸಹಾ ನೀಡಿರುತ್ತೆವೆ.ಈ ಮನವಿಗಳಿಗೆ ಸ್ಪಂದಿಸುತ್ತಾ ಅವರ ನಿರ್ಲಕ್ಷ್ಯ ತೆ ಮತ್ತು ಅಕ್ರಮಗಳ ಬಗ್ಗೆ ಅವರೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮಾಹಿತಿಯನ್ನು ನೀಡಿರುತ್ತಾರೆ.
ಅದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಧರಣಿ ನಡೆಸಿದರು.
ಮತ್ತು ಟಿ .ಎಚ್. ಒ ಅವರಿಗೆ ಮನವಿ ಪತ್ರ ಸಲಿಸಿದ್ದರು.
ಈ ಸಂದರ್ಭದಲ್ಲಿ ನಗರ ಸಂಚಾಲಕರು ರಮೇಶ್,ರವಿಕುಮಾರ್, ಸುನೀಲ್ ಕುಮಾರ್, ಬಾಬು,ಮುನಿಯಪ್ಪ,ವೆಂಕಟರವಣಪ್ಪ,ಸಂತೋಷ, ಶ್ರೀ ನಿವಾಸ ,ಮತ್ತು ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here