ಆಸ್ಪತ್ರೆ ವೈಧ್ಯರ ನಿರ್ಲಕ್ಷ,ಮೂರು ವರ್ಷದ ಮಗು ಸಾವು, ಪೋಷಕರ ಆಕ್ರೋಶ

0
223

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ : ವೈದ್ಯರ ನಿರ್ಲಕ್ಷ್ಯ ಆರೋಪ, ಮೂರು ವರ್ಷದ ಮಗು ಮೃತಪಟ್ಟಿರುವಂತ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಪಟ್ಟಣದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಬೈರಾಪುರ ತಾಂಡದ ಮುನಿರಾಜ ನಾಯ್ಕ್ ಮತ್ತು ಶಿಲ್ಪಬಾಯಿ ದಂಪತಿಗಳ ಗಂಡು ಮಗು ರೂಪೇಶ್ ವೈದ್ಯರ ನಿರ್ಲಕ್ಚ್ಯಕ್ಕೆ ಬಲಿಯಾದ ದುರ್ದೈವಿ. ಅಂದಹಾಗೆ ಮಗುವಿಗೆ ಜ್ವರ ಬಂದ ಕಾರಣ ಕಳೆದ ಒಂದು ವಾರದಿಂದ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆಯಲಾಗುತ್ತಿತ್ತು. ಮಗುವಿನ ರಕ್ತ ಪರೀಕ್ಷೆ ಮಾಡಿದ್ದ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಇದು ವೈರಲ್ ಫೀವರ್  ಅಷ್ಟೇ ಎಂದು ಹೇಳಿದ್ದರಂತೆ. ಆದ್ರೆ ಕಳೆದ ರಾತ್ರಿ ಮಗು ತೀವ್ರ ನಿತ್ರಾಣಗೊಂಡ ಕಾರಣ ಮತ್ತೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಪೋಷಕರು ಕರೆದು ತಂದಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ರಂತೆ. ಅಲ್ಲದೆ ಇದೇ ವೇಳೆ ಸತತ ಒಂದು ಗಂಟೆಗಳ ಸಮಯ ಕಾದರೂ ಯಾವುದೇ ಆಂಬುಲೆನ್ಸ್ ಬರದೇ ಇದ್ದು, ಮಗು ಮೃತಪಟ್ಟಿದೆ ಅಂತಾ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ. ಕೊನೆಗೆ ಖಾಸಗಿ ವಾಹನದಲ್ಲಿ ಮಗುವನ್ನು ಕೊಲಂಬಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಹೊತ್ತಿಗೆ ಮಾರ್ಗಮದ್ಯದಲ್ಲಿ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೆ ನಮ್ಮ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ ಮೃತ ಮಗುವನ್ನ ಸರ್ಕಾರಿ ಆಸ್ಪತ್ರೆಯಲ್ಲೆ ಇಟ್ಟು ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಕೆಲ ಕನ್ನಡ ಸಂಘಟನೆ ಕಾರ್ಯಕರ್ತರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನ ನಡೆಸಿದ್ರು. ಈ ವೇಳೆ ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಯಾವುದೇ ಪೂರ್ವ ಮಾಹಿತಿಯನ್ನ ಪಡೆಯದೇ ಕನಿಷ್ಠ ಪೋಷಕರಿಂದಲೂ ಮಾಹಿತಿ ಪಡೆಯದೆ ಏಕಾಏಕಿ ಸಂಘಟನೆಗಳ ವಿರುದ್ಧವೇ ನಾಲಿಗೆ ಹರಿಬಿಟ್ಟರು. ಜಗತ್ತಿನಲ್ಲಿ ಯಾರೂ ಸಾವನ್ನಪ್ಪುವುದಿಲ್ಲವೇ, ವೈದ್ಯರ ನಿರ್ಲಕ್ಷ್ಯದಿಂದ ಮಗು ಸತ್ತಿದೆ ಅಂತಾ ಹೇಗೆ ಹೇಳುತ್ತೀರಿ, ನೀವು ಜನರ ಮುಂದೆ ಹೀರೋ ಆಗಲು ಹೀಗೆ ಪ್ರತಿಭಟನೆ, ಆರೋಪ ಮಾಡ್ತಿದ್ದೀರಾ ಸಂಘಟನೆಗಳ ವಿರುದ್ದ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಹರಿಆಯ್ದರು. ಬಳಿಕ ಆರೋಗ್ಯ ಇಲಾಖೆ ಹಾಗೂ ಪೋಲಿಸರ ನಡೆಗೆ ಬೇಸತ್ತ ಪೋಷಕರು ಮರಣೋತ್ತರ ಪರೀಕ್ಷೆಗೂ ಒಪ್ಪದೆ ಮಗುವಿನ ಅಂತ್ಯಸಂಸ್ಕಾರಕ್ಕೆ ತಮ್ಮ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋದರು.

LEAVE A REPLY

Please enter your comment!
Please enter your name here