ಆ್ಯಂಬುಲೆನ್ಸ್ ನಲ್ಲೆ ಹೆರಿಗೆ…

0
138

ಬಳ್ಳಾರಿ /ಸಿರುಗುಪ್ಪ: ೧೦೮ ಆ್ಯಂಬುಲೆನ್ಸ್ ನಲ್ಲೆ ಗರ್ಬಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಬಾಣಂತಿಯನ್ನು ಆಸ್ಪತ್ರೆಗೆ ಕರೆ ದೊಯ್ಯುವ ವೇಳೆ ರಸ್ತೆಯಲ್ಲೆ ಹೆರಿಗೆ ನೋವು ಹೆಚ್ಚಾದ ಪರಿಣಾಮ ಬಾಣಂತಿ ಆ್ಯಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ, ಸಿರುಗುಪ್ಪ ತಾಲೂಕಿನ ನಡುವಿ ಗ್ರಾಮದ ಮಹಿಳೆ ಶಾರದಮ್ಮರಿಗೆ ಹೆರಿಗೆ ನೋವು ಕಾಣಿಸಿಕೊಂಡಿ ದ್ದರಿಂದ ೧೦೮ ವಾಹನದಲ್ಲು ಬಳ್ಳಾರಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದೊಯ್ಯ ಲಾಗುತ್ತಿತ್ತು, ಈ ವೇಳೆ ಹೆರಿಗೆ ನೋವು ಹೆಚ್ಚಾದ ಹಿನ್ನಲೆಯಲ್ಲಿ ಆಂಬ್ಯುಲೆನ್ಸ್ ನ್ನು ರಸ್ತೆ ಪಕ್ಕದಲ್ಲೇ ನಿಲ್ಲಿಸಿ ಅಂಬ್ಯುಲೈನ್ಸ್ ಸಿಬ್ಬಂದಿಗಳು ೧೦೮ ವಾಹನದಲ್ಲೆ ಹೆರಿಗೆ ಮಾಡಿಸುವಲ್ಲಿ ಯಶ್ವಸಿಯಾಗಿದ್ದಾರೆ, ಸಿರುಗುಪ್ಪ ತಾಲೂಕಿನ ಸಿದ್ದರಾಂಪುರ ಬಳಿ ಮಹಿಳೆಗೆ ಹೆರಿಗೆಯಾದ ನಂತರ ಮಹಿಳೆಯನ್ನು ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ, ಹೆರಿಗೆ ನಂತರ ಶಾರದಮ್ಮರ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ,

LEAVE A REPLY

Please enter your comment!
Please enter your name here