ಇಂಜಿನಿಯರಿಂಗ್ ಪದವಿದರರ ಉದ್ಘಾಟನಾ ಸಮಾರಂಭ..

0
171

ಬೆಂಗಳೂರು/ಕೃಷ್ಣರಾಜಪುರ: ವಿದ್ಯಾರ್ಥಿಗಳು ತಮ್ಮ ವ್ಯಾಸಾಂಗದಲ್ಲಿ ಕುತೂಹಲತೆಯನ್ನು ಅಳವಡಿಸಿಕೊಳ್ಳುವುದು ಅಗಾಧ ಜ್ಞಾನ ಹೊಂದಲು ಮೂಲವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋಧ್ಯಮ ಸಚಿವ ಪ್ರಿಯಾಂಕ್ ಎಮ್ ಖರ್ಗೆ ಅಭಿಪ್ರಾಯಪಟ್ಟರು. ಇಲ್ಲಿನ ಕೇಂಬ್ರಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ 2017ನೇ ಸಾಲಿನ ಇಂಜಿನಿಯರಿಂಗ್ ಪದವಿದರರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಠ್ಯದ ಅಥವಾ ಪಠ್ಯದ ಹೊರತಾದ ಜ್ಞಾನಾರ್ಜನೆಗೆ ಮೂಲವಾಗಿ ವಿದ್ಯಾರ್ಥಿಗಳು ಕುತೂಹಲತೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಸೂಕ್ತ, ಇತಿಹಾಸದುದ್ದಕ್ಕೂ ಕಂಡುಕೊಂಡ ಸತ್ಯಗಳು ಸಂಶೋಧನೆಗಳು ಕುತೂಹಲದ ಮನೋಭಾವದಿಂದಲೇ ಬೆಳಕಿಗೆ ಬಂದಿವೆ, ಕುತೂಹಲತೆ ಹಲವು ಅವೀಷ್ಕಾರಗಳಿಗೆ ನಾಂದಿ ಹಾಡಲಿದೆ ಎಂದು ವಿವರಿಸಿದರು. ಅಂತೆಯೇ ಪ್ರಶ್ನಿಸುವ ಮನೋಭಾವವೂ ಸಹ ಜ್ಞಾನಾರ್ಜನೆಗೆ ಪ್ರಮುಖವಾದದ್ದು, ನಗರ ಹೊರತು ಬೇರೆಡೆಯಿಂದ ವ್ಯಾಸಾಂಗಕ್ಕೆ ಬರುವ ವಿದ್ಯಾರ್ಥಿಗಳು ಪ್ರಶ್ನೆ ಮಾಡಲು ಹಿಂಜರಿಯಬಾರದು ಹಿಂಜರಿಕೆ ಕಲಿಕೆಯನ್ನು ಪೂರ್ಣವಾಗಿಸದು, ತಪ್ಪುಗಳು ಕಲಿಕೆಯ ಪ್ರಥಮ ಹಂತ, ತಪ್ಪು ಮಾಡದವನು ಹೊಸತನ್ನು ಎಂದಿಗೂ ಯತ್ನಿಸದೆ ಸಹಜತೆಯಲ್ಲೇ ಉಳಿದುಕೊಳ್ಳುತ್ತಾನೆ ಆದ್ದರಿಂದ ಹೊಸ ಯತ್ನಗಳಿಗೆ ಕೈಹಾಕಲೂ ಸಹ ಸದಾ ಮುಂದಿರಬೇಕು, ತಪ್ಪು ಮಾಡುವುದು ಕಲಿಕೆಯ ಭಾಗವೇ ಆಗಿದೆ ಎಂದರು. ಇಂದಿನ ಪೀಳಿಗೆ ಲಕ್ಷ್ಮಿಯ ಹಿಂದೆ ಓಡುತ್ತಿದೆ, ಸರಸ್ವತಿಯನ್ನು ಹಿಂಬಾಲಿಸಿದರೆ ಮಾತ್ರವೇ ಇರುವ ಅಲ್ಪ ಲಕ್ಷ್ಮಿಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಂದಿನ ಯುವಪೀಳಿಗೆ ಟಿವಿ, ಸಾಮಾಜಿಕ ಜಾಲತಾಣವನ್ನೇ ನಂಬಿ ಕೂತು ಸಮಾಜ ಸಂಪೂರ್ಣ ಹುಳುಕು ಎಂದು ಭಾವಿಸಿದಂತಿದೆ ನೈಜ ಚಿತ್ರಣ ಕಂಡುಕೊಳ್ಳಲು ಖುದ್ದು ಕಂಡುಕೊಳ್ಳುವುದು ಸಮಾಜದ ಅರಿವು ಮೂಡಿಸಲಿದೆ ಎಂದರು. ಪೋಷಕರು ಮಕ್ಕಳನ್ನು ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂದು ಅನಾವಾಶ್ಯಕ ಒತ್ತಡ ಹೇರುವುದು ಸರಿಯಲ್ಲ, ಅವರು ಸ್ವತಂತ್ರರನ್ನಾಗಿ ಬಿಟ್ಟು ತಮ್ಮನ್ನು ತಾವೇ ಸ್ವಯಂ ಕಂಡುಕೊಳ್ಳಲು ಬಿಡಬೇಕೆಂದು ತಿಳಿಸಿದರು. ಇಂದಿನ ಶಿಕ್ಷಣ ಸಂಸ್ಥೆಗಳು ಅತ್ಯಾಧುನಿಕ, ಕಲಿಕೆಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿವೆ, ಎಷ್ಟೋ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪ್ರಾಪ್ತಿಯಾಗದು, ನಿಮ್ಮ ಪೋಷಕರ ತ್ಯಾಗ ನಿಮ್ಮನ್ನು ಇಲ್ಲವರೆಗೆ ಕೊಂಡೊಯ್ದಿದೆ, ಇಂಜಿನಿಯರ್ಗಳಾಗುವುದು ಮುಖ್ಯವಲ್ಲ ದೇಶದಲ್ಲಿ ಬದಾಲವಣೆ ತರುವುದು ಅತ್ಯಂತ ಮುಖ್ಯವಾಗಲಿದೆ, ನಿಮ್ಮ ಗುರಿಯಿಂದ ಬೇರೆಡಗೆ ಗಮನವಹಿಸದೆ, ಭಾರತವನ್ನು ಚಿಂತನೆ ಮತ್ತು ಪಥವನ್ನು ಬದಲಾಯಿಸುವ ಕರ್ತವ್ಯ ನಿರ್ವಹಿಸಲು ಬದ್ಧರಾಗಿ ಎಂದರು. ಈ ಸಂದರ್ಭದಲ್ಲಿ ಟಿಸಿಎಸ್ ಕೇಂದ್ರ ಮುಖ್ಯಸ್ಥ ಇ.ಎಸ್.ಚಕ್ರವರ್ತಿ, ಎಮ್ಎಸ್ಎಮ್ಇ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಎನ್.ರಂಗಪ್ರಸಾದ್, ಕೇಂಬ್ರಿಡ್ಜ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್, ಪ್ರಾಂಶುಪಾಲ ಎಲ್.ಸುರೇಶ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here