ಇಂದಿರಾ ಕ್ಯಾಂಟೀನ್ನಲ್ಲಿ ಕಳಪೆ ಆಹಾರ.!?

0
31

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಡವರಿಗಾಗಿ ನಿರ್ಮಾಣ ವಾಗಿರುವ ಇಂದಿರಾ ಕ್ಯಾಂಟೀನ್ನಲ್ಲಿ ಗುಣಮಟ್ಟದ ಆಹಾರ ಹಾಕುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಳಗಳು ಬಿದ್ದಿರುವ ಅಕ್ಕಿ, ಈರುಳ್ಳಿ, ಟೊಮ್ಯಾಟೊ,ಇನ್ನೂ ಇತರೆ ಆಹಾರ ಪದಾರ್ಥ ಗಳಿಂದ ಊಟ ತಯಾರಿಸಿ ಹಾಕುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಾವಿರಾರುಜನ ಬಡ ಬಗ್ಗ ಕೂಲಿ ಕಾರ್ಮಿಕರು,ಹಮಾಲಿಗಳು ಅಲ್ಲೇ ಕೆಲಸ ಮಾಡುತ್ತಿದ್ದು,ಅವರ ಅನುಕೂಲಕ್ಕಾಗಿ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ್ದಾರೆ. ಆದರೆ ಸುಮಾರು ಎರಡು ತಿಂಗಳಿನಿಂದ ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ಕ್ಯಾಂಟೀನ್ನಲ್ಲಿ ಬೆಳಗಿನ ಉಪಹಾರ,ಮಧ್ಯಾಹ್ನದ ಊಟ, ಸಾಯಂಕಾಲದ ಊಟ ಸರಿಯಾದ ರೀತಿಯಲ್ಲಿ ವಿತರಣೆ ಮಾಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಾದ ಶಿವರಾಮ್ ಕ್ಯಾಂಟೀನ್ ಸಿಬ್ಬಂದಿ ಯನ್ನು ಪ್ರಶ್ನಿಸಿದರೆ,ಹೌದು ನೀವು ಕೊಡುವ ಹತ್ತು ರುಪಾಯಿಗೆ ರುಚಿ,ರುಚಿ ಊಟ ಕೊಡಲು ಆಗುತ್ತಾ…!? ಎಂದು ಉಡಾಫೆ ಉತ್ತರ ನೀಡುತ್ತಾರಂತೆ‌.

ಮಾದಿಗ ದಂಡೋರ ಶ್ರೀರಾಮಪ್ಪ ಆರೋಪ: ಇಂದಿರಾ ಕ್ಯಾಂಟೀನ್ ನಲ್ಲಿ ನೀಡುತ್ತಿರುವ ಕಳಪೆ ಆಹಾರ ಗುಣಮಟ್ಟದಲ್ಲಿ ಇಲ್ಲಾ ಎಂದು ಆರೋಪಿಸಿದ್ದಾರೆ.

ಇನ್ನೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಉಸ್ತುವಾರಿ ನಗರಸಭೆ ಪೌರಾಯುಕ್ತರು ಇತ್ತ ಗಮನಹರಿಸಿ ಬಡಬಗ್ಗರಿಗೆ ಹಸಿವು ನೀಗಿಸಲು ಮತ್ತು ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಾರಾ ಎಂದು ಕಾದು ನೋಡಬೇಕಿದೆ.ಅನುಕೂಲವಾಗುವಂತೆ ನೋಡಿಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here