ಇಂದಿರಾ ಕ್ಯಾಂಟೀನ್ ಉದ್ಘಾಟನೆ..

0
166

ಬೆಂಗಳೂರು/ಮಹದೇವಪುರ:ವಿರೋಧ ಪಕ್ಷದ ಟೀಕೆಗಳನ್ನು ಮೀರಿ ಇಂದಿರಾ ಕ್ಯಾಂಟೀನ್ ಯಶಸ್ವಿಯ ಹಾದಿಯಲ್ಲಿ ಸಾಗಿದ್ದು ಬಡಬಗ್ಗರಿಗೆ ಅನುಕೂಲವಾಗಿದೆ ಎಂದು ಪಾಲಿಕೆ ಸದಸ್ಯ ನಿತಿನ್ ಪುರುಷೋತ್ತಮ್ ತಿಳಿಸಿದರು. ಮಹದೇವಪುರ ಕ್ಷೇತ್ರದ ಗರುಡಾಚರ್ ಪಾಳ್ಯ ವಾರ್ಡಿನಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ನನ್ನ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆಯ ಪ್ರಾರಂಭಿಸಲು ಹೊರಟಾಗ ಹಲವು ಅಡೆತಡೆಗಳಾದವು, ಉದ್ಯಾನವನಗಳಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟುತ್ತಿದ್ದಾರೆಂಬ ಟೀಕೆಗಳು ವ್ಯಕ್ತವಾದವು, ಸಣ್ಣ ಹೋಟೆಲ್ಗಳು, ಪಾದಾಚಾರಿ ಮಾರ್ಗಗಳ ಮೇಲಿನ ತಳ್ಳುವ ಗಾಡಿಯ ವ್ಯವಹಾರಕ್ಕೆ ಪೆಟ್ಟಾಗಲಿದೆ ಜನರನ್ನು ಮತ್ತಷ್ಟು ಸೋಂಬೇರಿಗಳನ್ನಾಗಿ ಕಾಂಗ್ರೇಸ್ ಮಾಡಲು ಹೊರಟಿದೆ ಎಂಬ ಟೀಕೆ ಟಿಪ್ಪಣಿಗಳು ಸಮರೋಪಾದಿಯಲ್ಲಿ ವ್ಯಕ್ತವಾದವು, ಅವೆಲ್ಲಕ್ಕೂ ಪ್ರತ್ಯುತ್ತರವಾಗಿ ಇಂದಿರಾ ಕ್ಯಾಂಟೀನ್ ಸಾಗುತ್ತಿದೆ, ಬಡಬಗ್ಗರು, ಕೂಲಿ ಕಾರ್ಮಿಕರು ಮಧ್ಯಮ ವರ್ಗದ ಜನರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಇಂದಿರಾ ಕ್ಯಾಂಟೀನ್ನ ಉಪಹಾರ ಸೇವಿಸುವ ಮೂಲಕ ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಪೌಷ್ಟಿಕಾಂಶಯುಕ್ತ ಮತ್ತು ಆರೋಗ್ಯ ಪೂರಕ ಆಹಾರ ಪೂರೈಸುತ್ತಿರುವ ಸರ್ಕಾರಕ್ಕೆ ಬಡವರ ಮೆಚ್ಚುಗೆ ವ್ಯಕ್ತವಾಗಿದೆ ಎಂದರು. ಗರುಡಾಚರ್ಪಾಳ್ಯಯ ವಾರ್ಡನ್ನ ಬಿಬಿಎಂಪಿ ಕಚೇರಿ ಬಳಿ ಕ್ಯಾಂಟೀನ್ಗೆ ಅದ್ದೂರಿ ಚಾಲನೆ ದೊರೆತಿದ್ದು ಕೈಗಾರಿಕೆಗಳು, ವಾಣಿಜ್ಯ ಮಳಿಗೆಗೆಳು, ಕೊಳಚೆ ಪ್ರದೇಶಗಳಲ್ಲಿನ ಬಡ ಹಾಗು ಮಧ್ಯಮ ವರ್ಗದ ಜನರು ಕಡಿಮೆ ವೆಚ್ಚದಲ್ಲಿ ಆರೋಗ್ಯ ಪೂರಕ ಆಹಾರ ಸೇವಿಸಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ಹಿಟಾಚಿ ಮಂಜುನಾಥ್, ಶ್ರೀನಿವಾಸ್, ಬಾಬು, ವೆಂಕಟೇಶ್ ಶೆಟ್ಟಿ, ಗಿರೀಶ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here