ಸಸಿಯನ್ನು ಬೆಳಸಿ ಸಂರಕ್ಷಿಸಿಸಲು ಜಿಲ್ಲಾಧಿಕಾರಿ ಕರೆ

0
182

ರಾಯಚೂರು : ಇಂದು ಪ್ರತಿಯೊಬ್ಬರು ಸಸಿಗಳನ್ನು ಬೆಳಸಿ ಪರಿಸರವನ್ನು ಸಂರಕ್ಷಿಸಬೇಕೆಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ವಿದ್ಯಾರ್ಥಿಗಳಿಗೆ ತಿಳಿಸಿದರು.ನಗರದ ಎಸ್.ಆರ್.ಪಿ.ಎಸ್.ಕಾಲೇಜ್ ಆವರಣದಲ್ಲಿ ಜಿಲ್ಲಾಡಳಿತ,ನಗರ ಸಭೆ,ಅರಣ್ಯ ಇಲಾಖೆ,ಕ್ಯಾಷಟೆಕ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಸಸಿಯನ್ನು ನಡೆಸಿ ನೀರುಣಿಸುವ ಮೂಲಕ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗರದಲ್ಲಿ ಹಸಿರು ಎಂಬುದು ಕಾಣದಾಗಿದೆ ಎಲ್ಲಾ ಪ್ರದೇಶದಲ್ಲಿ ತ್ಯಾಜ್ಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಲಾಗಿದೆ ನಗರದ ಜನತೆ ಕಸವನ್ನು ಬಿಸಾಡದೆ ಸಂಗ್ರಹಿಸಿ ನಗರಸಭೆಗೆ ನೀಡಬೇಕು ಎಂದು ಹೇಳಿದರು.ಪರಿಸದ ದಿನ ಅರ್ಥ ಪೂರ್ಣ ಆಚರಣೆಗೆ ಎಲ್ಲರು ತಮ್ಮ ತಮ್ಮ ಮನೆಯ ಮುಂದೆ ಸಸಿಗಳನ್ನು ಬೆಳಸಿ ರಕ್ಷಣೆ ಮಾಡಬೇಕು ಇದು ನಿರಂತರವಾಗಿ ನಡೆಯಬೇಕು ಪರಿಸರ ದಿನಾಚರಣೆ ಇದ್ದಾಗ ಮಾತ್ರ ಸಸಿಗಳನ್ನು ಬೆಳಸುವುದು ಮಾಡದೆ ಹಸಿರು ನಗರವನ್ನಾಗಿಸಲು ಪಣ ಕೊಡಬೇಕು ಎಂದರು.ನಗರದಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿ ಮುಗಿದ ಬಳಿಕ ನಗರಸಬೆ ಮತ್ತು ಜಿಲ್ಲಾಡಳಿತ ವತಿಯಿಂದ ವರ್ಷದಲ್ಲಿ ಸುಮಸರು ೧೨ ಲಕ್ಷ ಸಸಿಗಳನ್ನು ಬೆಳಸಿ ನಗರವನ್ನು ಹಸಿರುಮಯವನ್ನಾಗಿಸಬೇಕಾಗಿದೆ ಎಂದರು ತಿಳಿಸಿದರು.ಹಿಂದಿವ ವರ್ಷಕಿಂತ ಈ ವರ್ಷ ೩ ಪಟ್ಟು ಸಸಿಗಳನ್ನು ಬೆಳೆಸುವ ಗುರಿಹೊಂದಿದೆ.ಜನರು ಹಸಿರಿಗೆ ಹೆಚ್ಚಿನ ಆದ್ಯತೆ ನೀಡಿ ವಿದ್ಯುತ್, ನೀರುನ್ನು ವ್ಯರ್ಥ ಮಾಡದೆ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು.ಸೋಲಾರ್ ವಿದ್ಯುತ್ ಬಳಕೆ ಮಾಡಿಕೊಂಡು ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕೆಂದು ಹೇಳಿದರು.ನಗರಸಭೆ ಆಯುಕ್ತ ಗುರುಲಿಂಗಪ್ಪ ಮಾತನಾಡುತ್ತಾ ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಪ್ರತಿಯೊಬ್ಬರು ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಪರಿಸರ ದಿನ ಆಚರಣೆಗೆ ಅರ್ಥ ಬರುತ್ತದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ಹೆಮಲತಾ ಬೂದೆಪ್ಪ,ಅರಣ್ಯಾಧಿಕಾರಿ ಶಿವರಾಜ,ಕ್ಯಾಷಟೆಕ್ ಅಧಿಕಸರಿ ಶರಣಬಸವ ಪಟ್ಟೆದ್,ಗ್ರಿನ್ ಸಿಟಿ ಯ ಅಧಿಕಾರಿ,ವಿವಿಧ ಸಂಘ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಭಾಗವಿಸಿದ್ದರು.

LEAVE A REPLY

Please enter your comment!
Please enter your name here