ಇಟಗಿ ಈರಣ್ಣರ ಶ್ರದ್ಧಾಂಜಲಿ ಕಾರ್ಯಕ್ರಮ

0
216

ಬಳ್ಳಾರಿ/ಹೊಸಪೇಟೆ: ನಿವೃತ್ತ ಉಪನ್ಯಾಸಕ ಖ್ಯಾತ ಶಾಹಿರಿ ದಿವಂಗತ ಇಟಗಿ ಈರಣ್ಣನವರು, ಪಾಠ-ಪ್ರವಚನಗಳಿಗೆ ಸೀಮತರಾಗಿರದೇ ಜನರಲ್ಲಿ ಜಾಗೃತಿ ಬೀಜವನ್ನು ಹುಟ್ಟು ಹಾಕಿದ್ದರು ಎಂದು ವಿಜಯನಗರ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ ಶಾಸ್ತ್ರಿ ಹೇಳಿದರು.

ಕನ್ನಡ ಕಲಾ ಸಂಘ ಹಾಗೂ ಜಾಗೃತ ನಾಯಕ ಬಳಗದ ವತಿಯಿಂದ ಕನ್ನಡ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಇಟಗಿ ಈರಣ್ಣ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಟಗಿ ಈರಣ್ಣರೊಬ್ಬ ಯಶ್ವಸಿ ಉಪನ್ಯಾಸಕರಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳುವಂತೆ ಆಗಾಗ ಸಲಹೆ ನೀಡುವ ಮೂಲಕ ಅವರಲ್ಲಿ ಶಿಸ್ತನ್ನು ಮೈಗೂಡಿಸಿದ್ದರು.

ಖ್ಯಾತ ಶಾಹಿರಿಯಾದ ಈರಣ್ಣನವರಲ್ಲಿ ಹೊಸದನ್ನು ಬಿಟ್ಟು, ಹಳೇ ವಸ್ತುಗಳಲ್ಲಿ ಜೀವ ತುಂಬವ ಶಕ್ತಿ ಅವರಲ್ಲಿತ್ತು. ಜೀವನದೂದಕ್ಕೂ ಯಾವದೇ ಕಪ್ಪು ಚುಕ್ಕಿ ಇಲ್ಲದೇ ಬದುಕಿದ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರು, ರಚಿಸಿದ ಶಾಹಿರಿ ಸುದೀಪ್ ಅಭಿಯನದ ಸ್ಪರ್ಷ ಚಿತ್ರದ ಚೆಂದಕಿಂತ ಚೆಂದ ಎನ್ನುವ ಹಾಡು ಇಂದಿನ ಜನ ಮನ್ನಣೆ ಪಡೆದಿದೆ ಎಂದು ಸ್ಮರಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತೆ ಕೆ.ನಾಗರತ್ನಮ್ಮ, ಭಾವೈಕ್ಯ ವೇದಿಕೆ ಸಂಚಾಲಕ ಪಿ.ಅಬ್ದುಲ್, ಭರಣಿ ಸಂಸ್ಕೃತಿ ವೇದಿಕೆ ಸಿ.ಮಂಜುನಾಥ, ವಕೀಲರಾದ ಕಲ್ಲಂ ಭಟ್ ಮಾತನಾಡಿದರು. ಕನ್ನಡ ವಿವಿಯ ಮಕಾಳೆ, ಗುಜ್ಜಲ ಚಂದ್ರಶೇಖರ,ಗುಂಡಿ ರಾಘುವೇಂದ್ರ ಬ್ಯಾಳಲ್ ಮಹೇಂದ್ರ ಉಪನ್ಯಾಸಕ ಮೃತ್ಯುಂಜಯ ರುಮಾಲೆ, ಸಿಪಿಐ ಗಣೇಶ ಉಪಸ್ಥಿತರಿದ್ದರು. ಕನ್ನಡ ಕಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ, ನಿರೂಪಿಸಿದರು. ಸಂಗೀತ ಕಲಾವಿದ ವೆಂಕನಗೌಡ ಇವರಿಂದ ಸಂಗೀತ ನಮನ ಸಲ್ಲಿಸಲಾಯತು. ಖ್ಯಾತ ಕೊಳಲು ವಾದಕ ಪದ್ಮನಾಭ ಬಾಪೂ ಅವರಿಂದ ಕೊಳಲು ವಾದನ ನಡೆಯಿತು. ಕನ್ನಡ ಕಲಾ ಸಂಘದ ಬದ್ರಿನರಾಯನ ಗುರುಪ್ರಸಾದ್ ಸದಸ್ಯರು, ಜಾಗೃತ ನಾಯಕ ಬಳಗದ ಪದಾಧಿಕಾರಿಗಳು ಸೇರಿದಂತೆ ಶಿಕ್ಷಕ, ಉಪನ್ಯಾಸಕ ಹಾಗೂ ವಿದ್ಯಾರ್ಥಿ ವರ್ಗ ಕಾರ್ಯಕ್ರಮದಲ್ಲಿ ಇದ್ದರು.

LEAVE A REPLY

Please enter your comment!
Please enter your name here