ಇಬ್ಬರು ಬಾಲಕರು ನೀರುಪಾಲು…

0
176

ವಿಜಯಪುರ/ಬಸವನ ಬಾಗೇವಾಡಿ: ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೂಡಗಿ ಕೆರೆಯಲ್ಲಿ ನಡೆದಿದೆ.
ಹತ್ತನೇ ನೇ ತರಗತಿ ವಿದ್ಯಾರ್ಥಿ ಶ್ರೀಕಾಂತ ನಾಯಕ(16) ಹಾಗೂ ಎಂಟನೇ ತರಗತಿ ವಿದ್ಯಾರ್ಥಿ ಸಾಗರ ರಾಠೋಡ(14) ಮೃತ ಬಾಲಕರು, ಮೃತರಿಬ್ಬರು ಕೂಡಗಿ ತಾಂಡಾ ನಿವಾಸಿಗಳೆಂದು ತಿಳಿದು ಬಂದಿದೆ. ಕೂಡಗಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕರು.ಶಾಲೆ ಮುಗಿಸಿಕೊಂಡು ಬರುವಾಗ ಸ್ನೇಹಿತರ ಜೊತೆಗೆ ಕೆರೆಗೆ ಬಾಲಕರು ತೆರಳಿದ್ದರು.
ಇನ್ನು ಈಜು ಬಾರದ ಹಿನ್ನೆಲೆ ಮುಳುಗಿ ಮೃತ ಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಶವಗಳನ್ನ ಹೊರತೆಗೆದ ಸ್ಥಳೀಯರು, ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here