ಉಗ್ರಗಾಮಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

0
407

ಬಳ್ಳಾರಿ /ಬಳ್ಳಾರಿ :2008ರ ಗುಜರಾತ ಸರಣಿ ಬಾಂಬ್ ಸ್ಟೋಟ ಪ್ರಕರಣ
ಮೂವರು ಉಗ್ರರು ಬಳ್ಳಾರಿ ನ್ಯಾಯಾಲಕ್ಕೆ
ಕಳ್ಳತನದ ಪ್ರಕರಣದ ಆರೋಪವು ಇವರ ಮೇಲಿತ್ತು ಬ್ಲಾಸ್ಟ್ ಗೆ ಬಳಸಲು ಕಾರು, ಬೈಕ್ ಕಳ್ಳತನ ಮಾಡಿದ್ರು.

2008ರಲ್ಲಿ ಗುಜರಾತಿನ ಅಹ್ಮದಬಾದ್‍ನಲ್ಲಿ ನಡೆದ ಸರಣಿ ಬಾಂಬ್ ಸ್ಟೋಟ ಪ್ರಕರಣದ ಮೂವರು ಉಗ್ರಗಾಮಿಗಳನ್ನು ಬಿಗಿ ಪೊಲೀಸ ಬಂದೋಬಸ್ತಿನ ಲ್ಲಿಂದು ಬಳ್ಳಾರಿ ನ್ಯಾಯಾಲ ಯದ ಮುಂದೆ ಹಾಜ ರುಪಡಿಸ ಲಾಯಿತು. ಬ್ಲಾಸ್ಟಿಗೆ ಬಳಸಿದ್ದ ಕಾರು ಮತ್ತು ಬೈಕ್​ಗಳ ನ್ನು ಕಳ್ಳತನ ಮಾಡಿದ್ದ ಆರೋಪ ವಿರುವ ಹಿನ್ನೆಲೆ ಇಂದು ಈ ಮೂವರನ್ನು ವಿಚಾರಣೆ ಮಾಡಲಾಯಿತು.

ಹೊಸಪೇಟೆ ಮೂಲದ ಉಗ್ರನಿಂದ ಬೈಕ್​ ಮತ್ತು ಕಾರು ಕಳ್ಳತನ… ಕೊಪ್ಪಳ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು ಇವತ್ತು ಬಳ್ಳಾರಿ ಕೋರ್ಟಿಗೆ ಉಗ್ರರು ಬಂದಿ ದ್ದಾರೆ. ಅಂದ್ರೇ, ಗುಜರಾತ ಸರಣಿ ಅಪಘಾತಕ್ಕೂ ಬಳ್ಳಾರಿಗೂ ಎಲ್ಲಿಯ ಸಂಬಂಧ ಎಂದು ಕೆಲ ಕಾಲ ಕೋರ್ಟಿನ ಲ್ಲಿದ್ದವರು ಗಲಿಬಿಲಿಗೊಂಡಿ ದ್ದರು. ಆದ್ರೇ, ಹೊಸಪೇಟೆ ಮೂಲದ ಅಸಾದುಲ್ಲ ಎನ್ನುವ ಉಗ್ರ  ಬಾಂಬ್ ಬ್ಲಾಸ್ಟ್​ ಕೃತ್ಯಕ್ಕೆ ಬಳಸಿದ ಕಾರು ಮತ್ತು ಬೈಕ್​ಗಳನ್ನು ಕೊಪ್ಪಳ ಮತ್ತು ಹೊಸಪೇಟೆಯಲ್ಲಿ ಕಳ್ಳತನ ಮಾಡಿ ದ್ದನಂತೆ ಆ  ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಸಾಧುಲ್ಲ ಸೇರಿದಂತೆ  ರಾಜುದ್ದೀನ್ ಸಾಸೀರ್, ಮತ್ತು ಶೇಖ್ ಆಹ್ಮದ್ ರನ್ನು ಬಳ್ಳಾರಿಯ ಸಿಜೆಎಂ ನ್ಯಾಯಲಯಕ್ಕೆ ಹಾಜರುಪಡ ಸಿದ್ದರು. ವಿಚಾರಣೆ ನಡೆಸಿದ ನ್ಯಾಯದೀಶರು ಅಗಸ್ಟ್ 7,8,9 ಕ್ಕೆ ವಿಚಾರಣೆ   ನಡೆಸುವುದಾಗಿ ಹೇಳಿದ್ದಾರೆ. ಸದ್ಯ ಅಲ್ಲಿಯವ ರೆಗೂ ಈ ಮೂವರು ಬಳ್ಳಾರಿ ಜೈಲಿನಲ್ಲಿ ಉಳಿಯಲಿದ್ದಾರೆ.

ಮೂಲಗಳ ಪ್ರಕಾರ ಆರೋಪಿಗಳನ್ನು ಕೊಪ್ಪಳ ಕೋ ರ್ಟ್​ಗೆ ಹಾಜರುಪಡಿಸ ಬೇಕಿತ್ತಂತೆ ಆದ್ರೇ, ಅಲ್ಲಿ ಉಗ್ರರನ್ನು ಉಳಿಸಿ ಕೊಳ್ಳಲು ಸುರಕ್ಷಿತ ಪ್ರದೇಶವಿಲ್ಲದಿರುವ ಕಾರಣ ಪ್ರಕರಣದ ವಿಚಾ ರಣೆ ಬಳ್ಳಾರಿಯ ನ್ಯಾಯಾಲಯಕ್ಕೆ ವರ್ಗಾಯಿಸಲು ಹೈ ಕೋರ್ಟ್​ ಸೂಚನೆ ನೀಡಿತ್ತಂತೆ. ಹೀಗಾಗಿ  ಉಗ್ರಗಾಮಿಗಳನ್ನು ಗುಜರಾತ ಪೊಲೀಸರು ಬಿಗಿ ಬಂದೋಬ ಸ್ತನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಮೂಲಗಳ ಪ್ರಕಾರ  ಈ ಮೂವರು  ಯಾಸಿನ್ ಭಟ್ಕಾಳ್​ ಸಹಚರರು ಎನ್ನಲಾಗುತ್ತಿದ್ದು, ಇವರು ಇವಿಷ್ಟೇ ಅಲ್ಲದೇ ಹಲವು ಪ್ರಕರಣಗಳಲ್ಲಿ  ಭಾಗಿಯಾಗಿ ದ್ದಾರೆ. ಸದ್ಯ ಉಗ್ರರಿರುವ ಕಾರಣ ಬಳ್ಳಾರಿ ಜೈಲಿಗೂ ಇದೀಗ ಭೀಗಿ ಭದ್ರತೆಯನ್ನು ಒದಗಿಸಲಾಗಿದೆ.

LEAVE A REPLY

Please enter your comment!
Please enter your name here