ಉಚಿತ ಕಂಪ್ಯೂಟರ್ ತರಬೇತಿ ಶಿಬಿರ

1
291

ಬಳ್ಳಾರಿ /ಹೊಸಪೇಟೆ:ಭಾರತ ಭಾವೈಕ್ಯತಾ ಸಮಿತಿ ವತಿಯಿಂದ ಉಚಿತ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ ಶಿಬಿರವನ್ನು ನಗರದ 33 ನೇ ವಾರ್ಡ್ ಮ್ಯಾಸಕೇರಿ ಸಮುದಾಯ ಭವನದಲ್ಲಿ ಗುರುವಾರ ಆರಂಭವಾಯಿತು.

ವಕೀಲ ಪಿ.ವೆಂಕಟೇಶ ಮಾತನಾಡಿ, ಬಡ ವಿದ್ಯಾವಂತ ನಿರುದ್ಯೋಗ ಯುವಕರಿಗಾಗಿ ಉಚಿತ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್ ತರಬೇತಿ ನೀಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇದು ಎಲ್ಲಾ ವಾರ್ಡ್‌ಗಳಲ್ಲಿ ಈ ತರಬೇತಿ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಮುಖಂಡ ಜಂಬಯ್ಯಪ್ಪ, ವಕೀಲ ತಾರಿಹಳ್ಳಿ ವೆಂಕಟೇಶ, ಸಮಿತಿಯ ಅಧ್ಯಕ್ಷ ಗುಜ್ಜಲ್. ಅಯ್ಯಣ್ಣ, ಉಪಾಧ್ಯಕ್ಷ ಬಿ.ಮೊಹಮ್ಮದ್ ಅಲ್ತಾಪ್, ಮತ್ತೊಬ್ಬ ಉಪಾಧ್ಯಕ್ಷ ಚಾರ್ಲ್ಸ್ ಪಿಂಟೋ, ಮಧನ್, ಕಿಚಿಡಿ ನವೀನ್, ಜಂಬುಕೇಶವ್, ಮಹೇಶ್, ಗೋಪಾಲ್, ರೂಪೇಶ್, ವೆಂಕಿ ಇತರರು ಹಾಜರಿದ್ದರು.

1 COMMENT

LEAVE A REPLY

Please enter your comment!
Please enter your name here