ಉಚಿತ ಕಣ್ಣಿನ ತಪಾಸಣಾ ಶಿಬಿರ..

0
329

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಸೋಣ್ಣಶೇಟ್ಟಹಳ್ಳಿಯ ನಸೀಬ್ ಶಾದಿಮಹಲ್ ನಲ್ಲಿ ಯುವ ಕಾಂಗ್ರೇಸ್ ಘಟಕ ವತಿಯಿಂದ ಭಾರತದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ರವರ ಜನ್ಮ ದಿನೋತ್ಸವದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಕಂಪ್ಯೂಟರೈಸ್ಡ್ ಕಣ್ಣಿನ ಪರೀಕ್ಷೆ ,ಹೊಲಿಗೆ ರಹಿತ ಫೇಕೋ ಎಮಲ್ಸಿಫಿಕೇಶ(ಲೇಸರ್)ಪೊರೆಯ ಶಸ್ತ್ರ ಚಿಕಿತ್ಸೆ ಮತ್ತು ಫೋಲ್ಡಬಲ್ ಐ.ಒ.ಎಲ್.ಅಳವಡಿಕೆ, ದೂರದೃಷ್ಠಿ ದೋಷ ಮತ್ತು ಸಮೀಪದ ದೃಷ್ಠಿ ದೋಷ ಕ್ಕೆ ಲ್ಯಾಸಿಕ್ ಮತ್ತು ಐ.ಸಿ.ಎಲ್. ಶಸ್ತ್ರ ಚಿಕಿತ್ಸೆ ,ಡಯಾಬಟೀಸ್ ರೋಗಿಗಳಿಗೆ ಲೇಸರ್ ಚಿಕಿತ್ಸೆ ಉಚಿತವಾಗಿ ಏರ್ಪಡಿಸಲಾಗಿತ್ತು.ಈ ಕಣ್ಣಿನ ಚಿಕಿತ್ಸೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಗಮಿಸಿದರು.ಈ ಸಂದರ್ಭದಲ್ಲಿ ಯುವ ಘಟಕ ಜಿಲ್ಲಾ ಉಪಾಧ್ಯಕ್ಷರದ ಮುಜಾಮೀಲ್, ಚಿಂತಾಮಣಿ ತಾಲ್ಲೂಕಿನ ಅಧ್ಯಕ್ಷರಾದ ಸಾಧಿಕ್ (ರೂಫಿ),ರಾಜ್ಯ ಕಾರ್ಯದರ್ಶಿ ಬಿ.ವೈ ಲೋಕೇಶ್ , ಸಿಕಂದರ್ ,ಬುಡನ್ ,ಟಿಪ್ಪು, ಅಫ್ರಿದ್ದಿ,ವಸೀಮ್ ಮತ್ತು ಡಾ ಶಾರಣಬಾಸಪ್ಪ ,ಗಿರೀಶ್ ಜಿ,ಅಶೋಕ್ ,ಚೈತ್ರ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here