ಉಚಿತ ಕು‌ಡಿಯುವ ನೀರಿನ ಟ್ಯಾಂಕರ್ ಗಳಿಗೆ ಚಾಲನೆ

0
253

ಬಳ್ಳಾರಿ /ಹೊಸಪೇಟೆ  ಉಚಿತ ಕು‌ಡಿಯುವ ನೀರಿನ ಟ್ಯಾಂಕರ್ ಗಳಿಗೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತ ಇಂದು ಚಾಲನೆ ನೀಡಿದರು.

ನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ತಮ್ಮ ಸ್ವಂತ ಅನುದಾನದಲ್ಲಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಮುಂದಾಗಿರುವ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತ ಇಂದು ನಗರದ ಪಾದಗಟ್ಟೆ ಆಂಜನೇಯ ದೇವಸ್ಥಾನದ ಬಳಿ ನೀರಿನ ಟ್ಯಾಂಕರ್ ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ತೀವ್ರ ಬರಗಾಲ ಆವರಿಸಿದೆ. ನಗರದ 35 ವಾರ್ಡುಗಳಲ್ಲಿ ಕುಡಿಯುವ ನೀರಿಗೆ ಆಹಾಕಾರ ಎದುರಾಗಿದೆ. ನೀರು ಪೂರೈಸಬೇಕಾಗಿದ್ದ ನಗರಸಭೆ ನೀರು ಪೂರೈಕೆಯಲ್ಲಿ ತೀವ್ರ ನಿರ್ಲಕ್ಷ್ಯ ತಾಳಿದೆ. ಈ ಕುರಿತು ತಾವು ಭೇಟಿ ನೀಡಿದ ಹಲವಾರು ವಾರ್ಡುಗಳಲ್ಲಿ ಸಾರ್ವಜನಿಕರು ಕುಡಿಯುವ ನೀರು ಪೂರೈಸಲು ವಿನಂತಿ ಮಾಡಿದ ಹಿನ್ನಲೆಯಲ್ಲಿ ಇಂದಿನಿಂದ 8 ಟ್ಯಾಂಕರ್ ಗಳ ಮೂಲಕ ನೀರು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ 35 ವಾರ್ಡುಗಳಿಗೆ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ವಿತರಿಸಲಾಗುವುದು ಎಂದರು.

ಅಲ್ಲದೆ ಸಾರ್ವಜನಿಕರು ಕೂ‌ಡ ಟ್ಯಾಂಕರ್ ಗಳ ಮೂಲಕ ಬರುವ ನೀರನ್ನು ಪೂಲು ಮಾಡದೆ ಮಿತವಾಗಿ ಬಳಸಬೇಕು. ಮೊದಲ ಟ್ಯಾಂಕರನ್ನು ತುಂಗಭದ್ರಾ ಜಲಾಶಯದ ಹೂಳೆತ್ತುತ್ತಿರುವ ರೈತರಿಗೆ ಕಳುಹಿಸಿ ಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಭವರ್ ಲಾಲ್ ನಾಹರ್, ಮುಖಂಡರಾಡ ಪಂತರ ಜಯಂತ್, ಜಂಬಾನಳ್ಳಿ ವಸಂತ, ಪಿ.ವಿ.ವೆಂಕಟೇಶ್, ದೇವರಮನಿ ಶ್ರೀನಿವಾಸ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪರಶುರಾಮಪ್ಪ, ಎನ್.ವೆಂಕಟೇಶ್, ನಗರಸಭೆ ಸದಸ್ಯ ಗೋವಿಂದ ರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here