ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ…

0
164

ಮಂಡ್ಯ/ಮಳವಳ್ಳಿ: ಭಾರತೀಯ ಜನತಾ ಪಾರ್ಟಿ ಹಾಗೂ ಮಹದೇಶ್ವರ ಗ್ಯಾಸ್ ಎಂಟರ್ ಪ್ರೈಸಸ್ ವತಿಯಿಂದ ಉಜ್ವಲ ಯೋಜನೆಯಡಿ ಬಡಕುಟುಂಬಗಳಿಗೆ ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು. ‌ ‌‌ 

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷ ಬಿ.ಸೋಮಶೇಖರ್ ಗ್ಯಾಸ್ ವಿತರಿಸಿ ಮಾತನಾಡಿ, ಮೋದಿ ಸರ್ಕಾರ ಅಧಿಕಾರ ಬಂದ ನಂತರ ಬಡವರ ಪರ ಹಲವು ಯೋಜನೆಗಳು ನೀಡಿದ್ದು ಅದರಲ್ಲಿ ಉಜ್ವಲ ಯೋಜನೆಯೂ ಒಂದು, 70 ವರ್ಷದಲ್ಲಿ ಕಾಂಗ್ರೇಸ್ ಮಾಡದ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ . ದೇಶದ ಎಲ್ಲಾ ರಾಜ್ಯದಲ್ಲೂ ಕಾಂಗ್ರೆಸ್ ಇಲ್ಲ ಮುಂದೆ ಈ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಹಿಂದುಳಿದವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್, ಮಾಜಿ ಅಧ್ಯಕ್ಷ ಹೆಬ್ಬಣಿಬಸವರಾಜು, ಪ್ರಧಾನಕಾರ್ಯದರ್ಶಿ ಕುಮಾರ್, ಸಂದೇಶ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here