ಉಚಿತ ಗ್ಯಾಸ್ ವಿತರಣೆ…

0
588

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ನಗರಸಭೆ ಆವರಣದಲ್ಲಿ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಉಚಿತ ಗ್ಯಾಸ್ ವಿತರಣೆ ಮಾಡಿದರು.

ನಗರದ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶೇ 24.10 ,ಶೇ 7.25 ಮತ್ತು ಶೇ 3 ರ ಯೋಜನೆಯಡಿಯಲ್ಲಿ ಎಸ್.ಸಿ/ಎಸ್.ಟಿ , ಓ.ಬಿ.ಸಿ ಹಾಗೂ ಅಂಗವಿಕಲರಿಗೆ ಉಚಿತ ಅನಿಲ ಸಂಪರ್ಕ ವಿತರಣೆ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ನಗರದ ಎಲ್ಲಾ ಫಲಾನುಭವಿಗಳಿಗೆ ಅನಿಲ ಸಂಪರ್ಕವನ್ನು ಕಲ್ಪಿಸುವ ಗುರಿ ಹೋಂದಿದಗದು ಈಗಾಗಲೇ ಪಡೆದಿರುವ ಫಲಾನುಭವಿಗಳು ಮತ್ತೆ ಮತ್ತೆ ಅರ್ಜಿಗಳನ್ನು ಸಲ್ಲಿಸಿ ಎರಡು ಮೂರು ಗ್ಯಾಸ್ ಗಳನ್ನು ಪಡೆಯದೆ ಇನ್ನೂ ಬಡ ಕುಟುಂಬಗಳು ಹಾಗೂ ಅನಿಲ ಸಂಪರ್ಕ ಇಲ್ಲದಿರುವ ಫಲಾನುಭವಿಗಳು ಸಾಕಷ್ಟು ಮಂದಿ ಇದ್ದಾರೆ ಅಂತಹವರಿಗೂ ಅವಕಾಶ ನೀಡಿ ಎಲ್ಲಾರು ಅಭಿವೃದ್ಧಿ ಹೊಂದಲು ನೆರವಾಗಿ ಎಂದರು.
ಕಾಲ ಕಳೆಯುತ್ತಿದಂತೆ ಸಮಾಜ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಇಂದಿನ ಜನ ಮುಖ್ಯವಾಗಿ ತಮ್ಮ ತಮ್ಮ ಪ್ರದೇಶವನ್ನು ಹೊಗೆ ಮುಕ್ತ ಪ್ರದೇಶವನ್ನಾಗಿ ಪರಿವರ್ತನೆ ಮಾಡಲು ಎಲ್ಲಾ ಜನರು ಸಾಥ್ ನೀಡಿ ಗ್ರಾಮ ಮತ್ತು ನಗರ ಪ್ರದೇಶವನ್ನು ಹೋಗೆ ಮುಕ್ತ ಪ್ರದೇಶವನ್ನಾಗಿ ಮಾಡಲು ಸಹಕರಿಸ ಬೇಕಾಗಿದೆ ಎಂದು ತಿಳಿಸಿದರು.
ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಸಕ್ರಿಯವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಿ ಬದಲಿಗೆ ಸರ್ಕಾರ ನೀಡಿರುವ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ಗಳನ್ನು ಬೇರೆಯವರಿಗೆ ಮಾರಿಕೊಳ್ಳದಿರ ತಾವೇ ಉಪಯೋಗಿಸಿಕೊಂಡು ಸರ್ಕಾರ ರೂಪಿಸುತ್ತಿರುವ ಯೋಜನೆ ಗಳಿಗೆ ಸಹಾಕರಿಸಿ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಯ ಅಧ್ಯಕ್ಷೆ ಸುಜಾತ ಶಿವಣ್ಣ, ಉಪಾಧ್ಯಕ್ಷೆ ಸುಜಾತ ಶಿವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ, ಪೌರಾಯುಕ್ತ ಮುನಿಶಾಮಿ, ನಗರಸಭೆ ಸದಸ್ಯರಾದ ಜಬೀನ, ಅಬ್ಬುಗುಂಡು ಶ್ರೀವಾಸ ರೆಡ್ಡಿ ,ವೆಂಕಟರವಣಪ್ಪ, ಸೇರಿದಂತೆ ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತಿಯಿದ್ದರು.

ವರದಿ: ಇಮ್ರಾನ್ ಖಾನ್ ನಮ್ಮೂರ ಟಿವಿ ಚಿಂತಾಮಣಿ.

LEAVE A REPLY

Please enter your comment!
Please enter your name here