ಉಚಿತ ಗ್ಯಾಸ್ ಸಂಪರ್ಕವಿತರಣೆ

0
116

ಮಂಡ್ಯ/ಮಳವಳ್ಳಿ: ರಶ್ಮಿ ಹೆಚ್.ಪಿ ಗ್ಯಾಸ್ ಕಿರುಗಾವಲು,ವತಿಯಿಂದ ಉಜ್ವಲ ಯೋಜನೆಯಡಿಯಲ್ಲಿ ಪಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕವಿತರಣೆ ಕಾರ್ಯಕ್ರಮ ವನ್ನು ಮಂಡ್ಯ ಲೋಕಸಭಾ ಸದಸ್ಯ ಸಿ ಎಸ್ ಪುಟ್ಟುರಾಜು ಚಾಲನೆ ನೀಡಿದರು.

ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರದ ಉಜ್ವಲ ಯೋಜನೆಯನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪುವಂತಾಗಬೇಕು . ಮುಂದಿನ ದಿನಗಳಲ್ಲಿ ಮತ್ತಷ್ಟು ಪಲಾನುಭವಿಗಳಿಗೂ ವಿತರಿಸಲಾಗುವುದು ಎಂದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ವಹಿಸಿ ಮಾತನಾಡಿ , ಕಾರ್ಯಕ್ರಮ ದಲ್ಲಿ ಕಂಪನಿ ಅಧಿಕಾರಿಗಳು ಗೈರು ಹಾಜರಾಗಿದ್ದು ಅವರ ಬಗ್ಗೆ ಕಿಡಿಕಾಡಿದರು, ಕಾರ್ಯಕ್ರಮ ದಲ್ಲಿ ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ್, ಜಿ.ಪಂ ವಿರೋದ ಪಕ್ಷ ನಾಯಕ ಹನುಮಂತು, ಸುಹಾತಪುಟ್ಟು, ಎಪಿಎಂಸಿ ಅಧ್ಯಕ್ಷ ಅಂಬರೀಶ್, ಮಾಜಿ ಶಾಸಕ ಡಾ.ಕೆ ಅನ್ನದಾನಿ, ರಶ್ಮಿ ಹೆಚ್.ಪಿ ಗ್ಯಾಸ್ ಕಿರುಗಾವಲು ಮಾಲೀಕ ಕೆ.ವಿ ರಾಜೇಂದ್ರ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here