ಉಚಿತ ಗ್ಯಾಸ್ ಸಿಲಿಂಡರ್,ಸ್ಟೌವ್ ವಿತರಣೆ…

0
56

ಮಂಡ್ಯ/ಮಳವಳ್ಳಿ: ತಹಸೀಲ್ದಾರ್ ಕಾರ್ಯಾಲಯ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಮುಖ್ಯಮಂತ್ರಿ ಗಳ ಅನಿಲ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವ್ ಗಳನ್ನು ಶಾಸಕ ಡಾ.ಕೆ ಅನ್ನದಾನಿ ರವರು ನೀಡುವ ಮೂಲಕ ಚಾಲನೆ ನೀಡಿದರು. ಮಳವಳ್ಳಿ ಪಟ್ಟಣದ ಕನಕಪುರ ರಸ್ತೆಯಲ್ಲಿರುವ ಆಹಾರ ಉಗ್ರಾಣದ ಆವರಣದಲ್ಲಿ ಕಾರ್ಯಕ್ರಮವನ್ನು ಶಾಸಕ ಡಾ.ಕೆ ಅನ್ನದಾನಿ ಚಾಲನೆ ನೀಡಿ ನಂತರ ಮಾತನಾಡಿ, ಹೆಣ್ಣು ಮಕ್ಕಳ ಕಷ್ಟ ಬಗ್ಗೆ ನಮಗೆ ಹತ್ತಿರದಿಂದ ಗೊತ್ತಿದೆ. ಅದಕ್ಕಾಗಿ ಈ ಯೋಜನೆಯ ಮೊದಲಹಂತವಾಗಿ 575 ಫಲಾನುಭವಿಗಳಿಗೆ ವಿವಿದ ಗ್ಯಾಸ್ ಏಜೆನ್ಸಿ ಮೂಲಕ ವಿತರಣೆ ಮಾಡುತ್ತಿದೆ. ಅದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮ ದಲ್ಲಿ ಪುರಸಭೆ ಸದಸ್ಯ ರಾಜಣ್ಣ, ಕಿರುಗಾವಲು ಹೋಬಳಿ ಹೆಚ್.ಪಿ ಗ್ಯಾಸ್ ಏಜೆನ್ಸಿ ಮಾಲೀಕ ಕೆ.ವಿ ರಾಜೇಂದ್ರ, ತಹಸೀಲ್ದಾರ್ ಚಂದ್ರಮೌಳಿ, ಮಾಜಿಪುರಸಭಾಧ್ಯಕ್ಷ ದೊಡ್ಡಯ್ಯ, ಮಾಲೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here