ಉಚಿತ ಡಿಪ್ಲೋಮಾ ಕೋರ್ಸ್ ಗಳ ತರಬೇತಿ..

0
144

ಬೆಂಗಳೂರು/ಕೆ.ಆರ್.ಪುರ; ನಿರುದ್ಯೋಗಿ ಯವಕ ಯುವತಿಯರು ಹಾಗು ಗೃಹಿಣಿಯರು ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಜೀವನ ಸಾಗಿಸಲು ಎ.ಕೃಷ್ಣಪ್ಪಜೀ ಸೇವಾ ಟ್ರಸ್ಟ್ ವತಿಯಿಂದ ಉಚಿತ ಡಿಪ್ಲೋಮಾ ಕೊರ್ಸ್ಗಳ ತರಬೇತಿ ನೀಡಲಾಗುವುದೆಂದು ಟ್ರಸ್ಟ್‌ನ ಅದ್ಯಕ್ಷ,  ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ಶಾಸಕ ಅಭ್ಯರ್ಥಿ ಹಾಗೂ ಸಮಾಜಸೇವಕ ಡಿ.ಎ.ಗೋಪಾಲ್ ತಿಳಿಸಿದರು.ಕ್ಷೇತ್ರದ ಕೆ.ನಾರಾಯಣಪುರ, ವಿಜಿನಾಪುರ, ಬಿ.ನಾರಾಯಣಪುರ ಹಾಗೂ ಸೀಗೇಹಳ್ಳಿಗಳಲ್ಲಿ ನೂತನವಾಗಿ ಆರಂಭಿಸುವ ಉಚಿತ ತರಬೇತಿ ಕೇಂದ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎ.ಕೃಷ್ಣಪ್ಪ ಸೇವಾ ಟ್ರಸ್ಟ್ ವತಿಯಿಂದ ವಿಧ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ನೌಕರರಿಗೆ ಮತ್ತು ನಾಗರೀಕರಿಗೆ 10 ರಿಂದ 50 ವರ್ಷದ ವಯೋಮಿತಿಯ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು ನುರಿತ ಹಾಗೂ ಅನುಭವಶಾಲಿಗಳಿಂದ ತರಬೇತಿ ನೀಡಲಾಗುವುದು. ಈಗಾಗಲೆ ಕ್ಷೇತ್ರದ 10 ಜಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದ್ದು ಇದುವರೆವಿಗೂ ಸುಮಾರು ಅಭ್ಯರ್ಥಿಗಳು ತರಬೇತಿ ಪಡೆದಿರುತ್ತಾರೆ ಅವರಿಗೆ ಭಾರತ ಸರ್ಕಾರದ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದೆಂದರು. ಇಂದು ಕೆ.ನಾರಯಣಪುರ, ವಿಜಿನಾಪುರ, ಬಿ.ನಾರಾಯಣಪುರ ಹಾಗು ಸೀಗೇಹಳ್ಳಿ ತರಬೇತಿ ಕೇಂದ್ರಗಳನ್ನು ನೂತನವಾಗಿ ಆರಂಭಿಸಲಾಯಿತು. ಪ್ರಮುಖವಾಗಿ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್, ಡಿಪ್ಲೋಮಾ ಇನ್ ಸ್ಪೋಕನ್ ಇಂಗ್ಲೀಷ್ ಕಮ್ಯೂನಿಕೇಷನ್, ಡಿಪ್ಲೋಮ ಇನ್ ಟೈಲರಿಂಗ್ ಮತ್ತು ಸ್ವಯಂ ಉದ್ಯೋಗ ಹಾಗೂ ಡಿಪ್ಲೋಮಾ ಇನ್ ಬ್ಯೂಟಿಷಿಯನ್ ಸ್ಕಿಲ್ ಡೆವಲಪ್ಮೆಂಟ್ ಕೋರ್ಸ್ಗಳ ತರಬೇತಿ ನೀಡಲಾಗುವುದೆಂದರು. ದಿನಕ್ಕೆ ಒಂದು ಗಂಟೆ ಅವಧಿಯಂತೆ ವಿದ್ಯಾಥರ್ಿಗಳು ಒಂದಕ್ಕಿಂತ ಹೆಚ್ಚು ಪ್ರೋಗ್ರಾಂ ಸೇರಬಹುದು ಎಂದು ಅವರು ತಿಳಿಸಿದರು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕೃಷ್ಣಪ್ಪ ಸೇವಾ ಟ್ರಸ್ಟ್ ವತಿಯಿಂದ ಒಟ್ಟಾಗಿ 15 ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದು ಅದರ ಪ್ರಯೋಜನವನ್ನು ಆ ಭಾಗದ ಜನರು ಪಡೆದುಕೊಳ್ಳಲು ತಿಳಿಸಿದರು.ಈ ಸಂದರ್ಭದಲ್ಲಿ ಕೆ.ಆರ್.ಪುರ ಕ್ಷೇತ್ರ ಜೆಡಿಎಸ್ ಅದ್ಯಕ್ಷ ದೇವರಾಜು, ಮುಖಂಡರಾದ ಬಾಲಣ್ಣ, ಗಗನ್, ರಾಜಪ್ಪ, ಬೋಧನೆ ಟೀಚರ್ಸ್ ಹಾಜರಿದ್ದರು.

LEAVE A REPLY

Please enter your comment!
Please enter your name here