ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ…

0
164

ಮಂಡ್ಯ/ಮಳವಳ್ಳಿ: ರೋಟರಿ ಸಂಸ್ಥೆ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ , ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು, ಹಾಗೂ ಶಾರದ ರೋಟರಿ ವತಿಯಿಂದ. ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರ ಮಳವಳ್ಳಿ ಪಟ್ಟಣದ ರೋಟರಿಶಾಲೆಯಲ್ಲಿ ನಡೆಸಲಾಯಿತು.
ಶಿಬಿರವನ್ನು ರೋಟರಿ ಸಂಸ್ಥೆ ಅಧ್ಯಕ್ಷ ಸತೀಸ್ ಪೂಜಾರಿ ಉದ್ಘಾಟಿಸಿ ಮಾತನಾಡಿ ಹಲವು ವರ್ಷಗಳಿಂದ ನಮ್ಮ ಸಂಸ್ಥೆ ನೇತ್ರ ತಪಾಸಣಾ ಶಿಬಿರ ನಡೆಸುತ್ತಿದ್ದು ಇಂದು ಸಹ ಸುಮಾರು 85 ಕ್ಕೂ ಹೆಚ್ಚು ತಪಾಸಣೆ ನಡೆಸಿದ್ದು ಅದರಲ್ಲಿ 13 ಮಂದಿ ಶಸ್ತ್ರಚಿಕಿತ್ಸೆ ರೋಗಿಗಳಿದ್ದು ಅವರನ್ನು ಬೆಂಗಳೂರು ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದರು. ಕಾರ್ಯಕ್ರಮ ದಲ್ಲಿ ರೋಟರಿ ಸಂಸ್ಥೆ ಸೋಮಶೇಖರ್, ಗೌತಮ್ ಚಂದ್ , ಸುರೇಶ್, ಅಬೀಬ್ ಉಲ್ಲಾ ಖಾನ್, ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರಮೋಹನ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here