ಉಚಿತ ರಕ್ತದಾನ ಶಿಬಿರ…

0
243

ಚಿಕ್ಕಬಳ್ಳಾಪುರ /ಚಿಂತಾಮಣಿ:ನಗರದ ಮಹಿಳಾ ಕಾಲೇಜಿನಲ್ಲಿ ಉಚಿತ ರಕ್ತದಾನ ಶಿಬಿರ 73 ಯೂನಿಟ್ ರಕ್ತ ಕೊಟ್ಟ ವಿದ್ಯಾರ್ಥಿನಿಯರು.ರಕ್ತದಾನ ಮಹಾದಾನ ಎಂಬುದನ್ನು ಅರಿತು ಪ್ರತಿಯೊಬ್ಬ ವಿದ್ಯಾರ್ಥಿಯು ರಕ್ತದಾನದ ಮೂಲಕ ಮತ್ತೊಬ್ಬರ ಪ್ರಾಣವನ್ನು ಉಳಿಸಲು ನೆರವಾಗಬೇಕು ಎಂದು ತಾಲೂಕು ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ನಾರಸಯಣರೆಡ್ಡಿ ಹೇಳಿದರು.ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಶಾಖೆ ಚಿಕ್ಕಬಳ್ಳಾಪುರ ಮತ್ತು ಯುವ ರೆಡ್ ಕ್ರಾಸ್ ಘಟಕ ಸರ್ಕಾರಿ ಮಹಿಳಾ ಕಾಲೇಜು ಚಿಂತಾಮಣಿ ಇವರ ಸಹಯೋಗದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಬಿರದಲ್ಲಿ ಒಟ್ಟು 73 ನೇ ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ ರಾಮಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು,
ಕಾಲೇಜು ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ.ಕೆ.ಎನ್ ಕೃಷ್ಣಪ್ಪ ಶಿಬಿರದ ನೇತೃತ್ವವನ್ನು ವಹಿಸಿದ್ದರು.ಶಿಬಿರದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ವಿಜಯೇಂದ್ರ ಕುಮಾರ್ ಚಂದ್ರಶೇಖರ್ ಡಾ ರತ್ನಮ್ಮ ನಾಗೇಶ್ ಮತ್ತಿತರರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here