ಉಚಿತ ಶೂ ವಿತರಣಾ ಕಾರ್ಯಕ್ರಮ

0
148

ಕಲಬುರಗಿ:ಶ್ರೀಮತಿ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರಕಾರಿ ಪ್ರೌಢ ಶಾಲೆ ಚಿಕ್ಕಮ್ಯಾಗೇರಿಯಲ್ಲಿ ರಾಜ್ಯ ಸರಕಾರದ ಶಿಕ್ಷಣ ಸುಧಾರಣೆಯ ಮಹತ್ವಾಕಾಂಕ್ಷಿ ಯೋಜನೆಯಾದ ಶೂ ವಿತರಣಾ ಕಾರ್ಯಕ್ರಮ ನಡೆಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಚಿಕ್ಕಮ್ಯಾಗೇರಿ ಜಿ.ಪಂ.ಸದಸ್ಯರಾದ ಶ್ರೀಮತಿ ಗಿರಿಜಾ ರೇವಣೆಪ್ಪ ಸಂಗಟಿಯವರು ರಾಜ್ಯ ಸರ್ಕಾರವು ಶಿಕ್ಷಣಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದೆ ಇದನ್ನು ಸದುಪಯೋಗ ಪಡಿಸಿಕೊಂಡು ನಮ್ಮ ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡೋಣ ಎಂದರು.ಸರಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.ಮುಖ್ಯೋಪಾದ್ಯಾಯರಾದ ವಿ ವಿ ಪಾಟೀಲ ಇವರು ಸರಕಾರದ ಹಲವಾರು ಯೋಜನೆಗಳು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಿದೆ.ಖಾಸಗಿ ಶಾಲೆಗೆ ಸವಾಲೆಸೆಯುವಂತೆ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅದ್ಯಕ್ಷ ಬಸವರಾಜಯ್ಯ ಹಿರೆಮಠ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ಮಾರುತಿ ಚಂಡೂರ . ಹನಮಪ್ಪ ಬಾವಿಕಟ್ಟಿ. ಮುದಿಯಪ್ಪ ಆಡೀನ್.ಉಪಸ್ಥಿತರಿದ್ದರು.

ವಿ.ಎಸ್.ಬೆಣಕಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಮಣ್ಣ ತಳವಾರ ಸ್ವಾಗತಿಸಿದರು. ಕೃಷ್ಣಮೂರ್ತಿ ಭಟ್ ವಂದಿಸಿದರು.ಬಸವರಾಜ ಮೇಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here