ಉಚಿತ ಸಾಮೂಹಿಕ ವಿವಾಹ…

0
199

ಬಳ್ಳಾರಿ /ಹೊಸಪೇಟೆ. ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಹಾಗೂ 23ನೇ ವರ್ಷದ ಗೂಳ್ಯದ ಗಾದಿಲಿಂಗೇಶ್ವರ ಪುರಾಣದ ಪ್ರವಚನದ ಮಂಗಳ ಮಹೋತ್ಸವದ ಅಂಗವಾಗಿ ಗ್ರಾಮದ ಶ್ರೀವೀರಾಂಜನೇಯ ದೇವಸ್ಥಾನದಲ್ಲಿ ಜರುಗಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 11 ಜೋಡಿ ವಧು-ವರರು ನೂತನ ದಾಂಪತ್ಯ ಜೀವಕ್ಕೆ ಕಾಲಿಟ್ಟರು. 

ಸಮಾರಂಭದ ಸಾನಿಧ್ಯವಹಿಸಿದ್ದ ಸ್ಥಳೀಯ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನೂತನ ದಾಂಪತ್ಯಕ್ಕೆ ಕಾಲಿಡುತ್ತಿರುವ ನವದಂಪತಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಆದರ್ಶ ದಂಪತಿಗಳಾಗಿ ಬಾಳಿ ಹಾಗೂ ನಿಮ್ಮ ಕುಟುಂಬದ ಹಾಗೂ ನಿಮ್ಮ ಸುತ್ತಮುತ್ತಲಿನ ಸಮಾಜಕ್ಕೆ ಹೆಸರು ತರುವಂತೆ ಬದುಕಿ ಎಂದರು.
ಮುಖ್ಯ ಅಥಿಗಳಾಗಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹೆಚ್.ಎನ್.ಎಫ್ ಮಹಮದ್ ಇಮಾಮ್ ನಿಯಾಜಿ ಮಾತನಾಡಿ, ಗ್ರಾಮದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಕಳೆದ 23 ವರ್ಷದ  ಅದ್ದೂರಿಯಾಗಿ ನಡೆಯುತ್ತಿದೆ. ಸಾಮೂಹಿಕ ವಿವಾಹಗಳು ಸಾಮಾನ್ಯರ ಮದುವೆಗಿಂತ ವಿಶೇಶವಾಗಿರುತ್ತವೆ. ಕಾರಣ ಹಲವಾರು ದಾರ್ಶನಿಕರು ಪೂಜ್ಯ ಗುರುಗಳು ಹಾಗೂ ಸಾವಿರಾರು ಹಿರಿಯರ ಸಮ್ಮುಖದಲ್ಲಿ ನಡೆಯುವುದರಿಂದ ವಿಶೇಷವಾದ ಆಶೀರ್ವಾದ ದೊರೆಯುತ್ತದೆ. ಇಂದಿನ ದುಬಾರಿ ಕಾಲದಲ್ಲಿ ಲಕ್ಷಾಂತರ ಹಣ ವ್ಯಯ ಮಾಡುವುದರಿಂದ ವಧು-ವರರಿಗೆ ಹಾಗೂ ಅವರ ಕುಟುಂಬದವರಿಗೆ ಆರ್ಥಿಕ ಹೊರೆ ಆಗುವುದರಿಂದ ಮಧ್ಯಮ ವರ್ಗದ ಹಾಗೂ ಕೆಳ ವರ್ಗದ ಜನರು ಈ ಒಂದು ಸಾಮೂಹಿಕ ವಿವಾಹ ಸಮಾರಂಭವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಗ್ರಾಮದ ಮುಖಂಡರಾದ ಪಂಪಾಪತಿ, ತಿಪ್ಪೇಸ್ವಾಮಿ, ರಾಮು, ಸೋಮಪ್ಪ, ಯರಿಸ್ವಾಮಿ, ಅಂಕ್ಲೇಶ್, ವಸಂತ, ನಾಗರಾಜ, ಜಯಪ್ಪ, ಮಾಂತೇಶ, ಗಾದಿ ಲಿಂಗೇಶ್ವರ ಪುರಾಣ ಸಮಿತಿಯ ಸಧ್ಭಕ್ತ ಮಂಡಳಿ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ನಾಗರೀಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here